ಈ ಕಾಡನ್ನೂ ಮುಳುಗಿಸಬೇಡಿ, ದಯವಿಟ್ಟು: ಶಶಿಧರ ಹಾಲಾಡಿ

ಯಾಕೋ ಶಿವರಾಮ ಕಾರಂತರು ನೆನಪಾಗುತ್ತಿದ್ದಾರೆ. ತಮ್ಮ ಇಳಿವಯಸ್ಸಿನಲ್ಲಿ ನಮ್ಮ ರಾಜ್ಯದ ಪರಿಸರ ರಕ್ಷಿಸಲು ಅವರು ಒಂದು ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಉತ್ತರಕನ್ನಡ ಜಿಲ್ಲೆಯ ದಟ್ಟಾರಣ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ ಕೈಗಾ ಯೋಜನೆಯಿಂದಾಗಿ ರಾಜ್ಯದ ಪರಿಸರಕ್ಕೆ ಹಾನಿಯುಂಟಾಗುವುದನ್ನು ಪ್ರತಿಭಟನೆಯ ಮೂಲಕ ಮೇಲಿನವರ ಗಮನಕ್ಕೆ ತಂದರು. ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದ ಕಾರಂತರು, ತಮ್ಮ ಪರಿಸರ ಕಾಳಜಿಯನ್ನು ಸಾರ್ವಜನಿಕವಾಗಿ ಅಂದು ವ್ಯಕ್ತ ಪಡಿಸಿದ ರೀತಿ ಅಭೂತಪೂರ್ವ. ಈ ರೀತಿ ಪ್ರತಿಭಟನೆ ಮಾಡಿದರೆ ಆಳುವವರಿಗೆ, ಅಕಾಡೆಮಿಗಳಿಗೆ ಬೇಸರವಾಗುತ್ತದೆ ಎಂದು ಅವರು ಹಿಂಜರಿಕೆಯಿಂದ ಮನೆಯೊಳಗೇ ಕುಳಿತರಲಿಲ್ಲ! ಬೇರಾವುದೇ […]