ಎತ್ತ ಹೋದವು ಮಂಡಗದ್ದೆ ಪಕ್ಷಿಗಳು.? ಅಭಿವೃದ್ಧಿ ಹೆಸರಲ್ಲಿ ಪಕ್ಷಿಧಾಮವೇ ನಾಶ..!

ಶಿವಮೊಗ್ಗ ಜಿಲ್ಲೆ ಪ್ರಾಕೃತಿಕ ಸಂಪನ್ನ ಪ್ರವಾಸಿ ತಾಣಗಳನ್ನ ಹೊಂದಿದೆ. ನದಿ, ಝರಿ, ಜಲಪಾತಗಳು, ಬೆಟ್ಟ ಗುಡ್ಡ ಕಣಿವೆಗಳು, ವನ್ಯಧಾಮ, ಪಕ್ಷಿಧಾಮಗ ನೆಲೆಬೀಡಾಗಿದೆ. ಅತೀ ಹೆಚ್ಚು ಜಲಾಶಯಗಳನ್ನ ಹೊಂದಿರುವ ಜಿಲ್ಲೆ ಕೂಡ ಶಿವಮೊಗ್ಗ. ಮಲೆನಾಡು ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ಜಿಲ್ಲೆ ದಶಕಗಳಿಂದ ವಿವೇಚನಾರಹಿತ ಯೋಜನೆಗಳಿಂದ ಪಾಕೃತಿಕವಾಗಿ ಕ್ಷೀಣವಾಗುತ್ತಿದೆ. ಅದಕ್ಕೆ ಉದಾಹರಣೆ ಎಂದರೆ ಶಿವಮೊಗ್ಗ ನಗರಕ್ಕೆ ಸಮೀಪವಿರುವ ಮಂಡಗದ್ದೆ ಪಕ್ಷಿಧಾಮ. ತುಂಗಾ ತೀರದಲ್ಲಿ ತೀರ್ಥಹಳ್ಳಿ ರಸ್ತೆಯ ಪಕ್ಕಕ್ಕೆ ಚಾಚಿಕೊಂಡಿದ್ದ ಈ ಅಧ್ಭುತ ಪಕ್ಷಿಧಾಮದಲ್ಲಿ ವಲಸೆ ಪಕ್ಷಿಗಳ ಕಲರವ ಕೇಳುತ್ತಿತ್ತು. ಹೊಳೆಲಕ್ಕಿ […]