ಆರು ದಶಕ ನೀರಲ್ಲಿದ್ದರೂ ನಶಿಸದ ಮಡೆನೂರು ಹಿರೇಭಾಸ್ಕರ ಅಣೆಕಟ್ಟು..!

ಬ್ರಿಟೀಷ್ ಇಂಡಿಯಾ ಸಮಯದಲ್ಲಿ ಜಲಾಶಯ, ಅಣೆಕಟ್ಟು, ಒಡ್ಡುಗಳನ್ನ ಹೇಗೆ ನಿರ್ಮಾಣ ಮಾಡುತ್ತಿದ್ದರು ಎಂಬ ಕೌತುಕ ಸಾಕಷ್ಟು ಜನರಲ್ಲಿರುತ್ತೆ. ಇಂದಿನಂತೆ ಕಾಂಕ್ರೀಟ್ ಬಳಸಿ ಕಟ್ಟುತ್ತಿರಲಿಲ್ಲ. ಉದ್ಘಾಟನೆಗೆ ಮುನ್ನವೇ ಉದುರಿ ಬೀಳುತ್ತಲೂ ಇರಲಿಲ್ಲ. ಇಂತಹದೊಂದು ಅದ್ಭುತ ಅಣೆಕಟ್ಟೊಂದು ಆರು ದಶಕಗಳ ಕಾಲ ನೀರಿನಲ್ಲೇ ಮುಳುಗಿದೆ. ಗಟ್ಟುಮುಟ್ಟಾಗಿಯೂ ಇದೆ ಎಂದರೆ ಎಂಥವರಿಗೂ ಅಚ್ಛರಿ ಎನಿಸದೇ ಇರದು. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶರಾವತಿ ನದಿಯಲ್ಲಿ ಎಂಟು ದಶಕದ ಅಣೆಕಟ್ಟಿದೆ, ಇದಕ್ಕೆ ಮಡೆನೂರು ಹಿರೇಭಾಸ್ಕರ ಎಂದು ಹೆಸರು. ಶರಾವತಿ ವನ್ಯಜೀವಿ ಸಂರಕ್ಷಿತ ವಲಯದೊಳಗೆ […]