ರಾಜಾರೋಶವಾಗಿ ಸಂರಕ್ಷಿತ ಅರಣ್ಯದೊಳಗೆ ಅಗಳ ಹೊಡೆದರು..!

ಚಿಕ್ಕಮಗಳೂರು ಭದ್ರಾ ಹಿನ್ನೀರಿನುದ್ದಕ್ಕೂ ಚಾಚಿಕೊಂಡಿರುವ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ವಿನಾಶ ಅವ್ಯಾಹತವಾಗಿ ಸಾಗಿದೆ. ಜಿಲ್ಲೆಯ ಅರಣ್ಯಾಧಿಕಾರಿಗಳ ನಿರಾಸಕ್ತಿಗೆ ಉಳ್ಳವರ ದೌರ್ಜನ್ಯಕ್ಕೆ ಪ್ರಾಕೃತಿಕ ಸಂಪತ್ತು ನಾಶವಾಗುತ್ತಿದೆ. ಭದ್ರಾ ಅಭಯಾರಣ್ಯದೊಳಗಿನ ಸರ್ಕಲ್‌ಗಳ ಆರ್ ಎಫ್ ಓ ಗಳೇ ಮುಂದೆ ನಿಂತು ವಿನಾಶಕ್ಕೆ ಎಡೆ ಮಾಡಿಕೊಡುತ್ತಿದ್ದಾರೆಂಬ ಅನುಮಾನ ಕಾಡುತ್ತಿದೆ. ಇದಕ್ಕೆ ಇಂಬು ನೀಡುವಂತೆ ಮತ್ತೊಂದು ಘಟನೆಯೊಂದು ನಡೆದಿದೆ. ಕೊಪ್ಪ ಅರಣ್ಯ ವಿಭಾಗ, ನರಸಿಂಹರಾಜಪುರ, ನೆಲಗದ್ದೆ ಗ್ರಾಮ ಆರಂಬಳ್ಳಿಯ ಸರ್ವೇ ನಂಬರ್ ೭೪ರಲ್ಲಿ ಈ ಭಾಗದ ಪ್ರಭಾವಿ ವ್ಯಕ್ತಿಗಳು ರಾಜಾರೋಷವಾಗಿ ಹಿಟಾಚಿ ಬಳಸಿ […]