ಕೊಡಚಾದ್ರಿ ಪ್ರವಾಸ ಆರಂಭ

ಕುದುರೆಮುಖ ವನ್ಯಜೀವಿ ವಿಭಾಗ, ಕೊಲ್ಲೂರು ವನ್ಯಜೀವಿ ವಲಯದ ಪರಿಮಿತಿಗೆ ಬರುವ ಶಿವಮೊಗ್ಗ ಜಿಲ್ಲೆಗೆ ಹೊಂದಿಕೊಂಡಿರುವ ಕೊಡಚಾದ್ರಿ ಜೀಪ್ ರೈಡ್‌ಗೆ ಸಂಬಂಧಿಸಿದಂತೆ ಇಲಾಖೆ ಕೆಲವು ನಿಬಂಧನೆಗಳನ್ನ ನೀಡಿದೆ. ಪರಿಸರ ಸಂರಕ್ಷಣೆ, ಪ್ರವಾಸಿಗರ ಜೀವ ಭದ್ರತೆ ಜೊತೆ ಜೀಪ್ ಮಾಲೀಕರು ಹಾಗೂ ಚಾಲಕರ ಮೇಲೆ ದೂರುಗಳೂ ಕೇಳಿ ಬಂದಿದ್ದರಿಂದ ಡಿಸಿಎಫ್ ಗಣಪತಿ.ಕೆ ಮುಚ್ಚಳಿಕೆ ಪತ್ರ ಬರೆದುಕೊಡುವಂತೆ ಆದೇಶಿಸಿದ್ದಾರೆ. ಕೊಡಚಾದ್ರಿ ಚಾರಣಯೋಗ್ಯ ಪ್ರವಾಸಿ ತಾಣ ಹಾಗೂ ನೆತ್ತಿಯ ಮೇಲಿನ ಸರ್ವಜ್ಞ ಪೀಠದ ನೆಪದಲ್ಲಿ ಕೊಲ್ಲೂರಿಗೆ ಬರುವ ಯಾತ್ರಾರ್ಥಿಗಳು ಇಲ್ಲಿಗೆ ನೂರಾರು ಸಂಖ್ಯೆಯಲ್ಲಿ […]
ಕೊಡಚಾದ್ರಿ ಬುಡದಲ್ಲೊಂದು ಮನಮೋಹಕ ಜಲಪಾತ..!

ಶಿವಮೊಗ್ಗದಲ್ಲಿ ಪ್ರಕೃತಿ ಪ್ರಿಯರಿಗೆ ಮುದ ನೀಡುವ ಸಾಕಷ್ಟು ಸ್ಥಳಗಳಿವೆ. ಇಂದಿಗೂ ಪ್ರವಾಸಿಗರ ಉಪಟಳದಿಂದ ದೂರನೇ ಉಳಿದಿವೆ. ಈಗೆಲ್ಲಾ ಪ್ರವಾಸಿಗರ ಅಭಿರುಚಿ ಬದಲಾದ್ದರಿಂದ ಹಾಗೂ ಪ್ರವಾಸಿತಾಣಗಳನ್ನ ವಿಕೃತಗೊಳಿಸುವ ಮನಸ್ಥಿತಿ ಹೊಂದಿರೋದ್ರಿಂದ ಅವುಗಳು ಹೀಗೆ ಇದ್ದರೇ ಒಳಿತು ಅನಿಸುತ್ತೆ.’ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಮಲೆನಾಡು ಪರಿಸರಕ್ಕೆ ಉತ್ತಮ ಉದಾಹರಣೆ. ಈ ತಾಲೂಕಿನಲ್ಲಿ ಸಿಗುವ ಪ್ರಾಕೃತಿಕ ಸೊಬಗು ಬೇರೆಡೆ ಸಿಗೋದಿಲ್ಲ. ತೀರ್ಥಹಳ್ಳಿ ಹಾಗೂ ಸ್ವಲ್ಪ ಮಟ್ಟಿನ ಸಾಗರವೂ ಸಹ ಮಲೆನಾಡಿನ ಪ್ರಾಕೃತಿಕ ಸೊಬಗನ್ನೇ ಹೊಂದಿದ್ದರೂ ಸಹ ಹೊಸನಗರ ಘಟ್ಟ ಪ್ರದೇಶ..! […]