ವಿದ್ಯುತ್ ದಾಹ ನೀಗಲು ಶರಾವತಿ, ವರಾಹಿ ಪಂಪ್ಡ್ ಸ್ಟೋರೇಜ್. ಬೆಂಗಳೂರಿಗೆ ಮೇಕೆದಾಟು ನೀರು: ಸಚಿವ ಜಾರ್ಜ್

ಶಿವಮೊಗ್ಗ: ವಿದ್ಯುತ್ ದಾಹ ನೀಗಲು ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ ಅನಿವಾರ್ಯ ಆದರೆ ಈ ನೀರನ್ನ ಬೆಂಗಳೂರಿಗೆ ತೆಗೆದುಕೊಂಡು ಹೋಗೋದಿಲ್ಲ. ಬೆಂಗಳೂರು ಕುಡಿವ ನೀರಿನ ದಾಹಕ್ಕೆ ಮೇಕೆದಾಟು ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದುಇಂಧನ ಸಚಿವ ಕೆ.ಜೆ ಜಾರ್ಜ್ ಶಿವಮೊಗ್ಗದಲ್ಲಿ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿ, ಶರಾವತಿ ವಿದ್ಯುತ್ ಉತ್ಪಾದನೆ ಘಟಕದಲ್ಲಿ ಪಂಪ್ಡ್ ಸ್ಟೋರೆಜ್ ನಿರ್ಮಾಣಕ್ಕೆ ತೀರ್ಮಾನ ತೆಗದುಕೊಂಡಿದ್ದೇವೆ. ಸುಮಾರು 8.500 ಕೋಟಿ ರೂ ವೆಚ್ಚ ತಗುಲಬಹುದು. ಶರಾವತಿ ನದಿಯಿಂದ ಜಲ ವಿದ್ಯುತ್ ಉತ್ಪಾದನೆ ಮಾಡಿ ಬಿಟ್ಟ ನೀರು ವಾಪಸ್ […]
ಕಂದಾಯ-ಅರಣ್ಯ ಭೂಮಿ, ಚಿಕ್ಕಮಗಳೂರು ಕಾಡಾನೆ: ಅರಣ್ಯ ಸಚಿವರ ಮಹತ್ವದ ಸಭೆ.

ರಾಜ್ಯದಲ್ಲಿ ಅರಣ್ಯ ಮತ್ತು ಕಂದಾಯ ಭೂಮಿಯ ವಿಚಾರದಲ್ಲಿ ಸಮಸ್ಯೆಗಳಿದ್ದು, ಇದನ್ನು ಜಂಟಿ ಸರ್ವೆಯ ಮೂಲಕ ಬಗೆಹರಿಸಬೇಕಾಗಿದೆ, ಪರಿಭಾವಿತ ಅರಣ್ಯ ಎಂದು ಘೋಷಿಸಲಾಗಿರುವ ಸರ್ವೆ ನಂಬರ್ ಮತ್ತು ಲಭ್ಯ ನಕ್ಷೆಯನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡುವ ಅಗತ್ಯವಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು. ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹಾಗೂ ಜಿಲ್ಲೆಯ ಶಾಸಕರುಗಳೊಂದಿಗೆ ವಿಧಾನಸೌಧದ ಸಮಿತಿ ಸಭಾಂಗಣದಲ್ಲಿಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಭಾಗಿಯಾಗಿ, ಪರಿಭಾವಿತ (ಡೀಮ್ಡ್)ಅರಣ್ಯದ ವಿಚಾರದಲ್ಲಿ ಈಗಾಗಲೇ […]