ಮಣಿಪಾಲದಿಂದ ಬಂದ ಮರು ದಿನ, ಮಂಗನ ಕಾಯಿಲೆಗೆ ಸಿದ್ದಾಪುರ ನಾಗಮ್ಮ ಮೃತ

ಉತ್ತರ ಕನ್ನಡ ಜಿಲ್ಲೆ: ಕೆಎಫ್‍ಡಿ ( ಕ್ಯಾಸನೂರು ಫಾರೆಸ್ಟ್ ಡಿಸೀಜ್ ) ಪಾಸಿಟಿವ್ ಬಂದ ಮಹಿಳೆ ನಾಗಮ್ಮ ಸುಬ್ಬ ಮಡಿವಾಳ, ವಯಸ್ಸು 57 ವರ್ಷ, ಜಿಡ್ಡಿ ಉಪಕೇಂದ್ರ ಕೋರ್ಲಕೈ, ಸಿದ್ದಾಪುರ ತಾಲ್ಲೂಕು ಇವರು ಫೆ.25 ರ ರಾತ್ರಿ 8.20 ಕ್ಕೆ ಮರಣ ಹೊಂದಿರುತ್ತಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಸತತ ಒಂದು ತಿಂಗಳ ಅನಾರೋಗ್ಯ ಮಣಿಪಾಲದಿಂದ ಮನೆಗೆ ಹೊರಟುಬಂದ ಮರುದಿನವೇ ಬಲಿ ತೆಗೆದುಕೊಂಡಿದ್ದು ಮಾತ್ರ ಆಘಾತ ಮೂಡಿಸಿದೆ. ಉತ್ತರ ಕನ್ನಡ ಜಿಲ್ಲೆ ಪ್ರಕರಣವಾದರೂ ಸಹ ಶಿವಮೊಗ್ಗದ ಮೆಗ್ಗಾನ್ […]
ಈ ವರ್ಷ 49 ಪಾಸಿಟೀವ್, ಎರಡು ಸಾವು, KFD ರೋಗಕ್ಕಿಲ್ಲ ಚುಚ್ಚುಮದ್ದು.

ಮಂಗನ ಕಾಯಿಲೆ(ಕೆಎಫ್ ಡಿ)ಕಂಡುಬರುವ ಪ್ರದೇಶದಲ್ಲಿ ಯಾವುದೇ ರೀತಿಯ ಜ್ವರ ಪ್ರಕರಣಗಳಿಗೆ ಕೆಎಫ್ ಡಿ ಪರೀಕ್ಷೆ ಮಾಡಿಸಬೇಕು. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಹಾಗೂ ಸೋಂಕು ಹೆಚ್ಚದಂತೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ರಾದ ಡಿ.ರಣದೀಪ್ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು. ವಾಡಿಕೆಯಂತೆ ಈ ವರ್ಷವೂ ಮೂರು ಜಿಲ್ಲೆಗಳಲ್ಲಿ ಪ್ರಕರಣಗಳು ವರದಿಯಾಗಿವೆ. ಜ.೧ ರಿಂದ ಫೆ.೨ ರವರೆಗೆ ರಾಜ್ಯದಲ್ಲಿ ಒಟ್ಟು […]