ಚನ್ನಮ್ಮಾಜಿ ಕೆರೆಬೇಟೆ ಹಾಗೂ ಮಲೆನಾಡಿನ ಸಾಂಪ್ರದಾಯಿಕ ಮೀನು ಶಿಕಾರಿ..!

ಮಲೆನಾಡಿನಲ್ಲಿ ಬುಡಕಟ್ಟು ಹಿನ್ನೆಲೆ ಇರುವ ಸಮುದಾಯಗಳಲ್ಲಿ ಅದರಲ್ಲೂ ಈಡಿಗ ಮತ್ತು ಒಕ್ಕಲಿಗರು ಶಿಕಾರಿ, ಮೀನು ಬೇಟೆಯನ್ನ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬಂದಿದ್ದಾರೆ. ಅರಣ್ಯ ಕಾನೂನುಗಳು ಬಿಗಿಯಾದ ಮೇಲೆ ಶಿಕಾರಿ ಜನಮಾನಸದಿಂದ ಮರೆಯಾಯ್ತು. ಆದರೆ ವರ್ಷವಿಡೀ ಮೀನು ಹಿಡಿಯುವ ಶೈಲಿಗಳು ಇಂದಿಗೂ ಬೇರೆ ಬೇರೆ ಹೆಸರಲ್ಲಿ ಉಳಿದುಕೊಂಡು ಬಂದಿವೆ. ಮುಂಗಾರು ಆರಂಭವಾಗುತ್ತಿದ್ದಂತೆ ಹಳ್ಳ-ಕೊಳ್ಳಗಳಿಂದ ನೀರಿನ ಸೆಳೆವಿನಲ್ಲಿ ಹತ್ತಿ ಬರುವ ಮೀನುಗಳನ್ನ ಹಿಡಿಯಲು ರಾತ್ರಿ ಬ್ಯಾಟರಿ ಇಟ್ಟುಕೊಂಡು ತೆರಳುತ್ತಾರೆ ಅವುಗಳಿಗೆ ಹತ್ತು ಮೀನು ಹೊಡೆಯೋದು ಎಂಬ ಪದ ಪ್ರಯೋಗವಿದೆ. ನೀರು ಇಳಿಯುತ್ತಿದ್ದಂತೆ […]