ಕೌಲುದುರ್ಗ (ಕವಿಲೇದುರ್ಗ) ಎಂಬ ಅಭೇದ್ಯ ಕೋಟೆ:

ನಮ್ಮ ಭಾರತದಲ್ಲಿ ಸಾವಿರಾರು ಕೋಟೆಗಳನ್ನು ನಾವು ಕಾಣಬಹುದು. ಅವುಗಳಲ್ಲಿ ಕೆಲವು ಮಾತ್ರ ಐತಿಹಾಸಿಕವಾಗಿದ್ದು ಅಲ್ಲಿ ಈ ಹಿಂದೆ ಘಟಿಸಿದ ಘಟನೆಗಳಿಂದ ಇತಿಹಾಸದ ಪುಟಗಳಲ್ಲಿ ಮತ್ತು ಜನರ ಮನಸ್ಸಿನಲ್ಲಿ ಇವುಗಳ ಹೆಸರು ಶಾಶ್ವತವಾಗಿ ಅಚ್ಚು ಹೊಡೆದಂತೆ ಉಳಿದಿದೆ. ಇನ್ನೂ ಈ ಕೋಟೆಗಳ ಹೆಸರು ಸಹ ಅರ್ಥ ಪೂರ್ಣವಾಗಿರುತ್ತದೆ. ಕೆಲವು ಆ ಸ್ಥಳದ ಹೆಸರಿನ ಜೊತೆಗೆ ಮೆಲುಕು ಹಾಕಿಕೊಂಡರೆ ಇನ್ನು ಕೆಲವು ಆ ನೆಲದ ಶ್ರೇಷ್ಠ ವ್ಯಕ್ತಿಗಳ ಹೆಸರನ್ನು ಸೂಚಿಸುತ್ತದೆ. ಆದರೆ ನಮ್ಮ ಮಲೆನಾಡಿನ ಒಂದು ಕೋಟೆಗೆ ಈ ನೆಲದ […]
ಏಳುಸುತ್ತಿನ ಕೋಟೆ ಕವಲೇದುರ್ಗ ಅವಸಾನದತ್ತ..!

ಮಲೆನಾಡು ತೀರ್ಥಹಳ್ಳಿ ತಾಲೂಕಿನ ಮಳೆಕಾಡಿನ ಮಧ್ಯೆ ಬೆಟ್ಟದ ನೆತ್ತಿಯ ಮೇಲೆ ಸುತ್ತಿಕೊಂಡು ನಿಂತಿರುವ ಕವಲೆದುರ್ಗ ಕೋಟೆ ಪ್ರವಾಸಿಗರ ಸ್ವರ್ಗ. ಅದರಲ್ಲೂ ಮಳೆಯಲ್ಲಿ ಕೊಡೆ ಹಿಡಿದು ಎರಡು ಕಿಲೋಮಿಟರ್ ದೂರ ಚಾರಣ ಮಾಡಿದರೆ ಸಿಗುವ ಅನುಭವ ಇನ್ನೆಲ್ಲೂ ಸಿಗಲು ಸಾಧ್ಯವಿಲ್ಲ. ಇಂತಹದೊಂದು ಪ್ರಾಕೃತಿಕ ಪರಿಸರ ಹಾಗೂ ಐತಿಹಾಸಿಕ ಹಿನ್ನೆಲೆಯ ಸ್ಥಳವೀಗ ಅವಸಾನದ ಹಂತಕ್ಕೆ ಬಂದು ನಿಂತಿದೆ. ಜನ ಪ್ರತಿನಿಧಿಗಳಿಗೆ ಈ ಸ್ಥಳದ ಕಾಯಕಲ್ಪ ಮಾಡುವ ಸಂಕಲ್ಪ ಇನ್ನೂ ಕೂಡಿ ಬಂದಿಲ್ಲ. ಪ್ರವಾಸದ ದೃಷ್ಟಿಯಿಂದಲೇ ನೋಡುವುದಾದರೆ, ಶಿವಮೊಗ್ಗದಿಂದ ೮೦ ಕಿಲೋಮೀಟರ್ […]