ಟಾಸ್ಕ್ ಫೋರ್ಸ್ ಲ್ಲಿ ಗಣಿಗಾರಿಕೆಗೆ ನಿಯಮ ಬಾಹಿರ ಅನುಮತಿ, ಅಧಿಕಾರಿಗಳ ವಿಚಾರಣೆಗೆ ಖಂಡ್ರೆ ಸೂಚನೆ

ಹಾಸನ: ನಿಯಮಗಳನ್ನ ಗಾಳಿಗೆ ತೂರಿ, ಟಾಸ್ಕ್ ಫೋರ್ಸ್ ಸಭೆಯಲ್ಲಿ ಕಾನೂನುಬಾಹಿರವಾಗಿ ಗಣಿಗಾರಿಕೆಗೆ ಅನುಮತಿ ನೀಡಲು ಅನುವಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದಾರೆ. ಖಂಡ್ರೆ ಕಚೇರಿ ಹೊರಡಿಸಿದ ಟಿಪ್ಪಣಿ ಹೀಗಿದೆ.. ಹಾಸನ ಜಿಲ್ಲೆಯ ಡೀಮ್ಸ್ ಅರಣ್ಯದಲ್ಲಿ ಸ್ಥಗಿತಗೊಳಿಸಲಾಗಿದ್ದ ಕಲ್ಲು ಗಣಿಗಾರಿಕೆ ಮತ್ತೆ ಮುಂದುವರಿದಿದ್ದರೂ ದಿ. 19.08.2024ರ ಟಿಪ್ಪಣಿ ಸಂಖ್ಯೆ ಅ.ಜೀಪ757/2024-25ನಲ್ಲಿ ಕ್ರಮಕ್ಕೆ ಸ್ಪಷ್ಟ ಸೂಚನೆ ನೀಡಿದ್ದರೂ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸುವಲ್ಲಿ ವಿಫಲವಾಗಿರುವ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಅರಕಲಗೂಡು ಮತ್ತು ಚನ್ನರಾಯಪಟ್ಟಣ […]
ಮೂರು ತಿಂಗಳು ನಿಗಾ, ಹುಲಿ ಸೆರೆ: ಸಂರಕ್ಷಿತ ವಲಯಕ್ಕೆ ಬಿಡಲು ಸೂಚನೆ.

ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗ, ಚಿಕ್ಕನಹಳ್ಳಿ ಮೀಸಲು ಅರಣ್ಯ ಹಾಗೂ ಅದರ ಸುತ್ತಲ ಗ್ರಾಮಗಳ ಜಮೀನಿನಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿದ್ದ ಹುಲಿಯನ್ನ ಸೆರೆಹಿಡಿಯಲಾಗಿದೆ. ಚಿರತೆ ಕಾರ್ಯಪಡೆಯೊಂದಿಗೆ ಟ್ರಾಪ್, ನೆಟ್ವರ್ಕ್, ಐ.ಆರ್. ಕ್ಯಾಮೆರಾಗಳು, ರಕ್ಷಣಾ ಸಲಕರಣೆಗಳು ಹಾಗೂ ಬೋನುಗಳನ್ನ ಬಳಸಿಕೊಂಡು ನ. 29 ರಿಂದ ಕಾರ್ಯಾಚರಣೆ ನಡೆಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಹುಲಿ ಇರುವಿಕೆ ಖಚಿತಗೊಂಡಿರುವ ಸ್ಥಳಗಳ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜನರು ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಸಾರ್ವಜನಿಕ ಪ್ರಚಾರದ ಮೂಲಕ ತಿಳಿಸಲಾಗಿತ್ತು. Wildlife Advance Alert System (WAAS) ತುರ್ತು […]