Ode to the west wind

Join Us on WhatsApp

Connect Here

ಸಾಗರ ವಿಭಾಗದಲ್ಲಿ ಕಾಡುಕೋಣಗಳ ನಿರಂತರ ಹತ್ಯೆ.!

ಪಶ್ಚಿಮಘಟ್ಟ ಸಾಲಿನಲ್ಲಿ ಕಂಡು ಬರುವ ವಿಶಿಷ್ಟ ಪ್ರಾಣಿ ಪ್ರಬೇಧ ಕಾಡೆಮ್ಮೆ/ ಕಾಡುಕೋಣಗಳು ನಿರುಪದ್ರವಿಗಳು. ಜನ ನಿಬಿಡ ಸ್ಥಳದಲ್ಲೂ ನಿರ್ಭಯವಾಗಿ ಓಡಾಡುವ ಈ ಪ್ರಬೇಧ ಮಾಂಸದ ದಾಹಕ್ಕೆ ಕ್ಷೀಣಿಸುತ್ತಿದೆ. ಮಲೆನಾಡಿನ ಕೆಲ ಸಮುದಾಯಗಳು ಸುಧಾರಿತ ಬಂದೂಕಿನಲ್ಲಿ ಅವ್ಯಾಹತವಾಗಿ ಬೇಟೆಯಾಡುತ್ತಿವೆ. ಶಿವಮೊಗ್ಗ ಜಿಲ್ಲೆ ಸಾಗರ ಅರಣ್ಯ ವಿಭಾಗದಲ್ಲಿ ಒಂದು ವರ್ಷದಲ್ಲಿ ಹತ್ತಾರು ಕಾಡೆಮ್ಮೆ-ಕಾಡುಕೋಣಗಳು ಹೀಗೇ ಬಲಿಯಾಗಿವೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಹುಂಚ ಹೋಬಳಿ ನಾಗರಹಳ್ಳಿ ಗ್ರಾಮದಲ್ಲಿ ಕಾಡುಕೋಣಗಳ ಮೂಳೆಗಳು ದೊರತಿದ್ದು ಆತಂಕಕ್ಕೀಡು ಮಾಡಿದೆ. ಈ ಭಾಗದಲ್ಲಿ ಗುಂಪಾಗಿ ಓಡಾಡುತ್ತಿದ್ದ […]

ಕಾಡುಕೋಣ-ಕಾಡೆಮ್ಮೆ ಕೊಂದ ಆರೋಪಿ ಪರಾರಿ:

ಸೊರಬ ತಾಲೂಕು ಚಂದ್ರಗುತ್ತಿ ಸಮೀಪ, ಕುಂದಗೋಳ- ನ್ಯಾರ್ಶಿ ಗ್ರಾಮದಲ್ಲಿ ಕಾಡುಕೋಣ ಹಾಗೂ ಕಾಡೆಮ್ಮೆಯನ್ನ ಬಲಿ ಪಡೆಯಲಾಗಿದೆ. ಕಾಡು ಪ್ರಾಣಿ ಬೇಟೆಗೆ ಬಿಟ್ಟ ವಿದ್ಯುತ್ ತಂತಿಗೆ ಎರಡು ಅಮೂಲ್ಯ ಜೀವಗಳು ಮೃತಪಟ್ಟಿವೆ. ದುರಂತ ಅಂದ್ರೆ ಮೃತ ಕೋಣಗಳು ಹೊಲದಂಚಿನಲ್ಲೇ ಕೊಳೆಯುವ ಸ್ಥಿತಿಯಲ್ಲಿದ್ದರೂ ಒಂದು ವಾರ ಯಾರೂ ಮಾಹಿತಿ ನೀಡಿಲ್ಲ.‌ ಬುಧವಾರ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಮರಣೋತ್ತರ ಪರೀಕ್ಷೆ ನಡೆಸಿ ಆರೋಪಿಯನ್ನ ಗುರುತಿಸಿದ್ದಾರೆ. ಸದ್ಯ ಘಟನೆಗೆ ಕಾರಣನಾದ ಆರೋಪಿ ತಲೆಮರೆಸಿಕೊಂಡಿದ್ದಾನೆ. ಈ ಬಗ್ಗೆ ಮಾಹಿತಿ ನೀಡಿದ ಸಾಗರ ಡಿಎಫ್ಓ ಸಂತೋಷ್, […]