ಪಟಗುಪ್ಪ, ಶರಾವತಿ ಹಿನ್ನೀರಿನ ಅದ್ಭುತ ತಾಣ..!

ಶರಾವತಿ ನದಿ, ನಾಡಿಗೆ ಬೆಳಕಾದರೆ ಮಲೆನಾಡಿಗರಿಗೆ ಶಾಪ ಎಂಬ ಮಾತಿದೆ. ನದಿ ಸಾಗುವ ಉದ್ದಕ್ಕೂ ಚಾಚಿಕೊಂಡಿರುವ ಊರುಗಳು ಇಂದಿಗೂ ಮುಳುಗಡೆ ಸಂತ್ರಸ್ತರ ಕಥೆ ಹೇಳುತ್ತವೆ. ಹೊಸನಗರ ಹಾಗೂ ಸಾಗರದಲ್ಲಿ ಹರಿವ ಶರಾವತಿ ನದಿಗೆ ಅಲ್ಲಲ್ಲಿ ಸೇತುವೆಗಳ ಅಗತ್ಯವಿದೆ. ಆದರೆ ನದಿಯೊಳಗೆ ಸೇತುವೆ ಕಟ್ಟುವ ಕಾಯಕ ದುಸ್ತರವಾಗಿತ್ತು. ಈಗೆಲ್ಲಾ ಆಧುನಿಕ ತಂತ್ರಜ್ಞಾನ ಬಳಸಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಹತ್ತು ವರ್ಷಗಳ ಹಿಂದೆ ದಡದಾಚೀಚೆ ಸಂಬಂಧ ಬೆಸೆವ ಸಂಪರ್ಕ ಸೇತುವೆಗಳ ಕನಸು ಕಂಡಿದ್ದ ಹರತಾಳು ಹಾಲಪ್ಪ ನನಸಾಗಿಸುತ್ತಾ ಬಂದರು. […]