ತುಂಗಾ ತೀರದಲ್ಲಿದಿದೆ ಸಂಗೀತ ಗ್ರಾಮ, ಇಲ್ಲಿನ ಸಾಧನಕನಿಗೆ ಪದ್ಮಶ್ರೀ ಗೌರವ.

ಗಮಕ ಗಂಧರ್ವ ಹೊಸಹಳ್ಳಿಯ ಹೆಚ್ಆರ್ ಕೇಶವಮೂರ್ತಿಗೆ ೨೦೨೨ರ ಪದ್ಮಶ್ರೀ ಕಲಾವಿಭಾಗದಲ್ಲಿ ಸಂದಿದೆ. ಮಲೆನಾಡಿನ ತುಂಗಾ ಮಡಿಲಲ್ಲಿರುವ ಪುಟ್ಟ ಹಳ್ಳಿ ಈ ಗಾರುಡಿಗನಿಂದ ದೇಶದಲ್ಲೆ ಹೆಸರು ಮಾಡುವಂತಾಗಿದೆ. ಸುಮಾರು ೮೮ ವರ್ಷ ಇಳಿವಯಸ್ಸಿನಲ್ಲೂ ಸಂಗೀತ ಸುಧೆ ಹರಿಸುವ ಕೇಶವಮೂರ್ತಿಗಳ ಸಾಧನೆಯನ್ನ ಇಡೀ ಜಿಲ್ಲೆ ಕೊಂಡಾಡಿದೆ. ಶಿವಮೊಗ್ಗದ ಮತ್ತೂರು-ಹೊಸಹಳ್ಳಿ ಅವಳಿ ಗ್ರಾಮಗಳು ಸಂಗೀತ ಪರಂಪರೆ, ವೇದ-ಶಾಸ್ತ್ರ ಅಧ್ಯಯನಗಳಿಗೆ ತನ್ನದೇ ಆದ ಕೊಡುಗೆಗಳನ್ನ ನೀಡಿವೆ. ಮತ್ತೂರು ಸಂಸ್ಕೃತ ಗ್ರಾಮ ಎಂದು ಎಲ್ಲರಿಗೂ ತಿಳಿದಿದೆ ಆದರೆ ಹೊಸಹಳ್ಳಿ ಗಮಕ ಗ್ರಾಮ ಎಂಬುದು ಗೊತ್ತಿಲ್ಲ. […]