ಯಾರಿಗೆ ಗೊತ್ತು ಕಾಡಾನೆ ದೇವರಿಗೆ ನಮಿಸಲು ಬಂದಿರಬಹುದು.

ಹಿರಿಯ ಪತ್ರಕರ್ತ, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಫೇಸ್ ಬುಕ್ ಪೋಸ್ಟ್, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ನಿನ್ನೆ ಹೋಗಿದ್ದೆ. ಆಶ್ಚರ್ಯ, ಕಾಡಾನೆಯೊಂದು ದೇವಸ್ಥಾನಕ್ಕೆ ಆಗಮಿಸಿತು. ಆಗ ಸಾಯಂಕಾಲ ಆರು ಗಂಟೆ ಸಮಯ. ಭಕ್ತರು ಯಾರೂ ಇರಲಿಲ್ಲ. ನಾವೇ ನಾಲ್ಕು ಮಂದಿ. ಮಂದಿರದ ಬಾಗಿಲು ಹಾಕುವ ಸಮಯ. ಆ ಕಾಡಾನೆ ಬಾಗಿಲು ಮುರಿದು ಒಳ ನುಗ್ಗಿದರೆ ಏನು ಗತಿ ಎಂದು ಗಾಬರಿಯಾಗಿದ್ದೆ. ನನ್ನ ಸ್ನೇಹಿತರೊಬ್ಬರು ದೇವಾಲಯದ ಒಳಗಿದ್ದರು. ನಾನು ಹೊರಗಿದ್ದೆ. […]