ನಾಯಿ ಮುಖವಿರುವ ಹುಲಿ ಕಂಡು ಬೆಚ್ಚಿದ ಜನ

ಬೆಳೆಯನ್ನು ರಕ್ಷಿಸಿಕೊಳ್ಳುವ ಸಲುವಾಗಿ ರೈತರು ಬಳಿದಿರುವ ಹುಲಿ ಬಣ್ಣದ ಪಟ್ಟಿಯ ನಾಯಿ ಹನೂರು – ಅಜ್ಜೀಪುರ ಮಾರ್ಗದಲ್ಲಿ ಸಂಚರಿಸಿಸುತ್ತಿತ್ತು. ಇದನ್ನ ಕಂಡ ಸಾರ್ವಜನಿಕರು ಭಯಭೀತರಾಗಿದ್ದರು. ಇದು ಆತಂಕವನ್ನು ಉಂಟು ಮಾಡಿತ್ತು. ಅಜ್ಜೀಪುರ ಗ್ರಾಮದ ಅರಣ್ಯದಂಚಿನಲ್ಲಿ ಕೆಲ ರೈತರು ಜಮೀನನ್ನು ಹೊಂದಿದ್ದರು. ಆಗ್ಗಾಗ್ಗೆ ಕೋತಿಗಳು ಲಗ್ಗೆ ಇಟ್ಟು ಫಸಲನ್ನು ಹಾಳು ಮಾಡುತ್ತಿದ್ದವು. ಇದರಿಂದ ರೈತರು ರೋಸಿ ಹೋಗಿದ್ದರು. ಕೋತಿಗಳ ಹಾವಳಿಯನ್ನು ತಡೆಗಟ್ಟುವ ಉದ್ಧೇಶದಿಂದ ರೈತರು ತಮ್ಮ ಕೈಚಳಕವನ್ನು ತೋರಿಸಿದ್ದು, ನಾಯಿಯೊಂದಕ್ಕೆ ಹುಲಿ ಪಟ್ಟಿಯನ್ನು ಬಣ್ಣದಿಂದ ಬಳಿದು ಸಂಚರಿಸಲು ಬಿಟ್ಟಿದ್ದಾರೆ. […]