ನೀರಿಲ್ಲ, ನಿರ್ವಹಣೆ ಇಲ್ಲ, ಸೊರಬದ ಗುಡವಿ ಪಕ್ಷಿಧಾಮದಲ್ಲಿ ಬಾನಾಡಿಗಳ ಮಾರಣಹೋಮ

ಸೊರಬ: ಸೊರಬದಲ್ಲಿರುವ ಗುಡವಿ ಪಕ್ಷಿಧಾಮ ವಲಸೆ ಹಕ್ಕಿಗಳಿಗೆ ಪ್ರಾಶಸ್ತ್ಯವಾದ ಸ್ಥಳವಾಗಿತ್ತು. ಪರಿಸರ ಪ್ರೇಮಿಗಳು, ಪಕ್ಷಿ ವೀಕ್ಷಕರಿಗೂ ನೆಚ್ಚಿನ ತಾಣವಾಗಿತ್ತು. ಆದರೆ ಈಗದು ಹಕ್ಕಿಗಳಿಗೆ ಸ್ಮಶಾನವಾಗಿದೆ. ಬಿಸಿಲಿನ ಝಳಕ್ಕೆ ನೀರೆಲ್ಲಾ ಬತ್ತಿ ಮರುಭೂಮಿಯಂತಾಗಿದೆ. ಏನೂ ಅರಿಯದ ಮುಗ್ಧ ಪಕ್ಷಿಗಳೀಗ ನಿಂತಲ್ಲೇ ಪ್ರಾಣ ಬಿಡುತ್ತಿವೆ. ನಾಲ್ಕು ದಶಕಗಳಿಂದ ಅಭಿವೃದ್ಧಿ ಕಾಣದ ಈ ತಾಣ ಈ ವರ್ಷ ಹವಾಮಾನ ವೈಪರೀತ್ಯಕ್ಕೆ ನಮ್ಮ ವ್ಯವಸ್ಥೆಯನ್ನ ಅಣಕಿಸುತ್ತಿದೆ. ಪಕ್ಷಿಧಾಮದಲ್ಲಿ ಸಾಲು ಸಾಲು ಹಕ್ಕಿಗಳು ಮೃತಪಟ್ಟಿದ್ದರೂ ಸಹ ಅರಣ್ಯ ಇಲಾಖೆ ಅಸಹಾಯಕ ಸ್ಥಿತಿಯಲ್ಲಿದೆ. ರಾಜಕಾರಣಿಗಳಿಗೆ ಇದರ […]