ಟಿಕೆಟ್ ವಂಚನೆ ಹಣ ಪರ ಸ್ತ್ರೀ ಅಕೌಂಟ್ ಗೆ ವರ್ಗಾವಣೆ ಮಾಡಿದ DRFO, ಸಸ್ಪೆಂಡ್.!

ಚಿಕ್ಕಮಗಳೂರು : ಸರ್ಕಾರದ ಹಣ ಫೋನ್ ಪೇ ಮೂಲಕ ಪರ ಹೆಂಗಸಿನ ಖಾತೆಗೆ ವರ್ಗಾವಣೆ ಆರೋಪದಲ್ಲಿ ಕಳಸ ಅರಣ್ಯ ಇಲಾಖೆಯ ಡಿ.ಆರ್.ಎಫ್.ಓ. ಚಂದನ್ ಗೌಡ ಅಮಾನತುಗೊಂಡಿದ್ದಾರೆ. ರಾಣಿಝರಿ ಜಲಪಾತ, ಬಂಡಾಜೆ ಫಾಲ್ಸ್ ಬಳಿ ಟಿಕೆಟ್ ಗೋಲ್ ಮಾಲ್, ಆನ್ ಲೈನ್ ಟಿಕೆಟ್ ಫೋರ್ಜರಿ ಮಾಡಿ ಸರ್ಕಾರಕ್ಕೆ ಮೋಸ ಹಾಗೂ9000 ರುಪಾಯಿ ಹಣವನ್ನ ಸರ್ಕಾರಕ್ಕೆ ಮೋಸ ಮಾಡಿರುವುದು ಸಾಬೀತಾಗಿದ್ದು ತನಿಖೆ ಮುಂದುವರಿದಿದೆ. ಈ ಪ್ರಕರಣ ಚಿಕ್ಕಮಗಳೂರು ಜಿಲ್ಲೆಯ ಇನ್ನೊಂದು ಪರಿಸರ ಪ್ರವಾಸೋದ್ಯಮದ ಎತ್ತುವಳಿಗೆ ಸಾಕ್ಷಿಯಾಗಿದೆ. ತನಿಖೆ ಕುರಿತು ಚಿಕ್ಕಮಗಳೂರು […]
ಟಾಸ್ಕ್ ಫೋರ್ಸ್ ಲ್ಲಿ ಗಣಿಗಾರಿಕೆಗೆ ನಿಯಮ ಬಾಹಿರ ಅನುಮತಿ, ಅಧಿಕಾರಿಗಳ ವಿಚಾರಣೆಗೆ ಖಂಡ್ರೆ ಸೂಚನೆ

ಹಾಸನ: ನಿಯಮಗಳನ್ನ ಗಾಳಿಗೆ ತೂರಿ, ಟಾಸ್ಕ್ ಫೋರ್ಸ್ ಸಭೆಯಲ್ಲಿ ಕಾನೂನುಬಾಹಿರವಾಗಿ ಗಣಿಗಾರಿಕೆಗೆ ಅನುಮತಿ ನೀಡಲು ಅನುವಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದಾರೆ. ಖಂಡ್ರೆ ಕಚೇರಿ ಹೊರಡಿಸಿದ ಟಿಪ್ಪಣಿ ಹೀಗಿದೆ.. ಹಾಸನ ಜಿಲ್ಲೆಯ ಡೀಮ್ಸ್ ಅರಣ್ಯದಲ್ಲಿ ಸ್ಥಗಿತಗೊಳಿಸಲಾಗಿದ್ದ ಕಲ್ಲು ಗಣಿಗಾರಿಕೆ ಮತ್ತೆ ಮುಂದುವರಿದಿದ್ದರೂ ದಿ. 19.08.2024ರ ಟಿಪ್ಪಣಿ ಸಂಖ್ಯೆ ಅ.ಜೀಪ757/2024-25ನಲ್ಲಿ ಕ್ರಮಕ್ಕೆ ಸ್ಪಷ್ಟ ಸೂಚನೆ ನೀಡಿದ್ದರೂ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸುವಲ್ಲಿ ವಿಫಲವಾಗಿರುವ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಅರಕಲಗೂಡು ಮತ್ತು ಚನ್ನರಾಯಪಟ್ಟಣ […]
ಇಬ್ಬರನ್ನ ಕೊಂದು ಮೂಡಿಗೆರೆ ನಡುಗಿಸಿದ್ದ ಭೈರ ಸೆರೆಸಿಕ್ಕ.

ಮೂಡಿಗೆರೆ ತಾಲೂಕನ್ನೇ ನಡುಗಿಸಿದ್ದ ಕಾಡಾನೆ ಇಬ್ಬರನ್ನ ಬಲಿತೆಗೆದುಕೊಂಡಿತ್ತು. ಅಪಾರ ಪ್ರಮಾಣದ ಬೆಳೆ ನಾಶ ಮಾಡಿತ್ತು. ಜನರ ಸಿಟ್ಟಿಗೆ ಶಾಸಕ ಎಂಪಿ ಕುಮಾರಸ್ವಾಮಿ ಬಟ್ಟೆಯೂ ಹರಿದು ರಾಷ್ಟ್ರೀಯ ಸುದ್ದಿಯಾಗಿತ್ತು. ಹಲವು ವರ್ಷಗಳಿಂದ ಚಾಣಾಕ್ಷತನದಿಂದ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಭೈರಾನನ್ನ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಭೈರ ಹೆಸರು ಸ್ಥಳೀಯರೇ ನೀಡಿದ್ದರು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಊರುಬಗೆ ಹೊಸಳ್ಳಿಯಲ್ಲಿ ಭಾಗದಲ್ಲಿ ಒಂದು ವಾರದಿಂದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು. ಈ ಆನೆಯನ್ನೂ ಸೇರಿ ಈ ಭಾಗದಲ್ಲಿ ಒಟ್ಟು […]