ಜಿಂಕೆ ಶಿಕಾರಿ, ಪಾರ್ಟಿಗೆ ಸಿದ್ಧತೆ,ಅರಣ್ಯಾಧಿಕಾರಿಗಳಿಂದ ರೇಡ್
ಮಲೆನಾಡಲ್ಲಿ ದಿನೇ ದಿನೇ ಶಿಕಾರಿಗೆ ವನ್ಯಜೀವಿಗಳು ಬಲಿಯಾಗುತ್ತಿವೆ. ಸಾಮಾನ್ಯವಾಗಿ ಹಳ್ಳಿ ಜನ, ಕೂಲಿ-ಕಾರ್ಮಿಕರಷ್ಟೇ ಸಿಕ್ಕಿಬೀಳುತ್ತಾರೆ. ಆದರೆ ಶೋಕಿಗಾಗಿ, ಹವ್ಯಾಸಕ್ಕೆ ಬೇಟೆಯಾಡುವ ದುರುಳರ ಕೃತ್ಯಗಳು ಬೆಳಕಿಗೆ ಬರುವುದು ವಿರಳ. ಎರಡು ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಜಿಂಕೆ ಶಿಕಾರಿ ಮಾಡಿ, ಪಾರ್ಟಿ ಮಾಡಲು ಸಿದ್ಧರಿದ್ದವರ ಮೇಲೆ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲೇ ಬೃಹತ್ ಗಾತ್ರದ ಜಿಂಕೆ ಬೇಟೆಯಾಡಿ ಪಾರ್ಟಿಗೆ ಸಿದ್ಧರಿದ್ದರು ಎಂದರೆ ಈ ಭಾಗದಲ್ಲಿ ಯಾವ ತರಹದ ಉಪಟಳವಿದೆ […]