ಪರಿಸರ ಪ್ರೇಮಿಗಳ ಮನವಿಗೆ ಸ್ಪಂದನೆ: ಆಫ್ ರೋಡ್ Rally ತನಿಖೆಗೆ ಖಂಡ್ರೆ ಆದೇಶ:

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ, ಬಾಳೂರು ಭಾಗದಲ್ಲಿ ಮಿತಿಮೀರಿದ ಆಫ್ ರೋಡ್ ಜೀಪ್ ರ್ಯಾಲಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪರಿಸರಾಸಕ್ತರ ವಿರೋಧ ಹಾಗೂ ಮಾಧ್ಯಮಗಳ ವರದಿ ಗಮನಿಸಿರುವ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆಯವರ ಕಾರ್ಯಾಲಯ ಗಂಭೀರವಾಗಿ ತೆಗೆದುಕೊಂಡಿದ್ದು ಈಗಾಗಲೇ ಆಯೋಜನೆಗೊಂಡ ರ್ಯಾಲಿಗಳ ಬಗ್ಗೆಯೂ ವರದಿ ನೀಡುವಂತೆ ಸೂಚಿಸಲಾಗಿದೆ. ಅರಣ್ಯ ಹಾಗೂ ಪರಿಸರ ಖಾತೆ ಸಚಿವ ಈಶ್ವರ ಬಿ.ಖಂಡ್ರೆ ಹೊರಡಿಸಿರುವ ಟಿಪ್ಪಣಿ ಹೀಗಿದೆ. ಪಶ್ಚಿಮಘಟ್ಟ ಮತ್ತು ಅರಣ್ಯ ಮೋಜು, ಮಸ್ತಿಯ ತಾಣಗಳಲ್ಲ. ಈ ಪ್ರದೇಶದಲ್ಲಿ ನೂರಾರು ಪ್ರಭೇದದ ಖಗ, ಮೃಗ, […]