ಯಾರಿಗೆ ಗೊತ್ತು ಕಾಡಾನೆ ದೇವರಿಗೆ ನಮಿಸಲು ಬಂದಿರಬಹುದು.

ಹಿರಿಯ ಪತ್ರಕರ್ತ, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಫೇಸ್ ಬುಕ್ ಪೋಸ್ಟ್, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ನಿನ್ನೆ ಹೋಗಿದ್ದೆ. ಆಶ್ಚರ್ಯ, ಕಾಡಾನೆಯೊಂದು ದೇವಸ್ಥಾನಕ್ಕೆ ಆಗಮಿಸಿತು. ಆಗ ಸಾಯಂಕಾಲ ಆರು ಗಂಟೆ ಸಮಯ. ಭಕ್ತರು ಯಾರೂ ಇರಲಿಲ್ಲ. ನಾವೇ ನಾಲ್ಕು ಮಂದಿ. ಮಂದಿರದ ಬಾಗಿಲು ಹಾಕುವ ಸಮಯ. ಆ ಕಾಡಾನೆ ಬಾಗಿಲು ಮುರಿದು ಒಳ ನುಗ್ಗಿದರೆ ಏನು ಗತಿ ಎಂದು ಗಾಬರಿಯಾಗಿದ್ದೆ. ನನ್ನ ಸ್ನೇಹಿತರೊಬ್ಬರು ದೇವಾಲಯದ ಒಳಗಿದ್ದರು. ನಾನು ಹೊರಗಿದ್ದೆ. […]
ನಾಯಿ ಮುಖವಿರುವ ಹುಲಿ ಕಂಡು ಬೆಚ್ಚಿದ ಜನ

ಬೆಳೆಯನ್ನು ರಕ್ಷಿಸಿಕೊಳ್ಳುವ ಸಲುವಾಗಿ ರೈತರು ಬಳಿದಿರುವ ಹುಲಿ ಬಣ್ಣದ ಪಟ್ಟಿಯ ನಾಯಿ ಹನೂರು – ಅಜ್ಜೀಪುರ ಮಾರ್ಗದಲ್ಲಿ ಸಂಚರಿಸಿಸುತ್ತಿತ್ತು. ಇದನ್ನ ಕಂಡ ಸಾರ್ವಜನಿಕರು ಭಯಭೀತರಾಗಿದ್ದರು. ಇದು ಆತಂಕವನ್ನು ಉಂಟು ಮಾಡಿತ್ತು. ಅಜ್ಜೀಪುರ ಗ್ರಾಮದ ಅರಣ್ಯದಂಚಿನಲ್ಲಿ ಕೆಲ ರೈತರು ಜಮೀನನ್ನು ಹೊಂದಿದ್ದರು. ಆಗ್ಗಾಗ್ಗೆ ಕೋತಿಗಳು ಲಗ್ಗೆ ಇಟ್ಟು ಫಸಲನ್ನು ಹಾಳು ಮಾಡುತ್ತಿದ್ದವು. ಇದರಿಂದ ರೈತರು ರೋಸಿ ಹೋಗಿದ್ದರು. ಕೋತಿಗಳ ಹಾವಳಿಯನ್ನು ತಡೆಗಟ್ಟುವ ಉದ್ಧೇಶದಿಂದ ರೈತರು ತಮ್ಮ ಕೈಚಳಕವನ್ನು ತೋರಿಸಿದ್ದು, ನಾಯಿಯೊಂದಕ್ಕೆ ಹುಲಿ ಪಟ್ಟಿಯನ್ನು ಬಣ್ಣದಿಂದ ಬಳಿದು ಸಂಚರಿಸಲು ಬಿಟ್ಟಿದ್ದಾರೆ. […]
ಮದ್ದೂರು ಅರಣ್ಯವಲಯದಲ್ಲಿ ಸಂಚಾರ ಅವಧಿ ಮಿತಿ ಕಡಿತಗೊಳಿಸಿ…!

ರಾತ್ರಿ ಸಂಚಾರ ನಿಷೇಧವಿರುವ ಗುಂಡ್ಲುಪೇಟೆ ಮದ್ದೂರು ಅರಣ್ಯ ವಲಯದಲ್ಲಿ ತಮಿಳುನಾಡಿನಲ್ಲಿ ಲಾರಿ ಆನೆಯನ್ನ ಬಲಿತೆಗೆದುಕೊಂಡಿದೆ. ಲಾರಿ ಚಾಲಕನ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ ವಾಹನವನ್ನ ವಶಕ್ಕೆ ಪಡೆದುಕೊಂಡಿದೆ. ಆದರೆ ಆನೆ ಸಾವಿಗೆ ಯಾರು ಹೊಣೆ.. ? ಸದ್ಯ ಈ ಭಾಗದಲ್ಲಿ ರಾತ್ರಿ ಸಂಚಾರಕ್ಕಿರುವ ನಿರ್ಬಂಧಗಳೇನು..? ಪತ್ರಕರ್ತರು ಹಾಗೂ ಪರಿಸರ ಹೋರಾಟಗಾರರು ಆಗಿರುವ ಜೋಸೆಫ್ ಹೂವರ್ ತಮ್ಮ ಅಸಮಾಧಾನ ಹೀಗೆ ಹೊರಹಾಕಿದ್ದಾರೆ. ಗುಂಡ್ಲುಪೇಟೆ ಬಂಡಿಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ( NH 766) ಕೇರಳ […]