ಪಂಪ್ ಸೆಟ್-ಮರಳು ದಿಬ್ಬ ನಿರ್ಮಿಸಿ ನೀರು ಎತ್ತದಂತೆ ಭದ್ರಾ ನದಿ-ನಾಲೆ ಸುತ್ತ ನಿಷೇಧಾಜ್ಞೆ.

ಭದ್ರಾ ನಾಲೆ, ನದಿ ಪಾತ್ರ ಪ್ರದೇಶದಲ್ಲಿ ಅನಧಿಕೃತ ಪಂಪ್ಸೆಟ್ ಮತ್ತು ತೂಬುಗಳ ಮೂಲಕ ನೀರನ್ನು ಎತ್ತುವುದು ನಿಷೇಧಿಸಿ ಭದ್ರಾ ನಾಲೆ ಮತ್ತು ನದಿ ಪಾತ್ರಗಳ ಸುತ್ತ 100 ಮೀ ವ್ಯಾಪ್ತಿಯಲ್ಲಿ ನಿಬಂಧನೆಗಳನ್ನು ವಿಧಿಸಿ ಫೆ.19 ರಿಂದ 26 ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ. ಪಂಪ್ ಸೆಟ್ ಹಾಕಿ ನೀರು ಎತ್ತುವ ರೈತರು: ಫೆ.5 ರ ರಾತ್ರಿಯಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹಾವೇರಿ ಮತ್ತು ಗದಗ ಜಿಲ್ಲೆಯ ಪಟ್ಟಣಗಳಿಗೆ ಇದುವರೆಗೂ ಒಟ್ಟು 1 ಟಿಎಂಸಿ […]