ರಕ್ತಕಾರಿಕೊಂಡು ಧರೆಗೊರಗಿದ ಕಾಡುಕೋಣ

ಐದು ವರ್ಷದ ಕಾಡುಕೋಣ ಸಾಗರದ ಆವಿನಹಳ್ಳಿ ಸಮೀಪದ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದು ಈ ಭಾಗದಲ್ಲಿ ಸಂಚರಿಸುವ ಅಕ್ರಮ ಮರಳು ಸಾಗಾಟದ ವಿರುದ್ಧ ಪರಿಸರಾಸಕ್ತರು ಕಿಡಿಕಾರಿದ್ದಾರೆ. ಕೆಲ ತಿಂಗಳಲ್ಲಿ ಇದು ಎರಡನೇ ಪ್ರಕರಣವಾಗಿದೆ. ಈ ಕುರಿತು ಸಾಗರ ಡಿಎಫ್ ಓ ರಾಮಕೃಷ್ಣಪ್ಪ ಮಾತನಾಡಿ, ಕಾಡುಕೋಣ ಮೃತಪಟ್ಟ ಬಗ್ಗೆ ಇಲಾಖೆ ತನಿಖೆ ನಡೆಸುತ್ತಿದೆ. ಐದು ವರ್ಷ ಪ್ರಾಯದ ಕಾಟಿ ಭಾನುವಾರ ಬೆಳಗ್ಗೆ ಸುಮಾರು 4 ರಿಂದ 5 ಗಂಟೆ ಮಧ್ಯೆ ಅಸುನೀಗಿದೆ. ಆ ಭಾಗದಲ್ಲಿ ಓಡಾಡುವ ಲಾರಿಗಳು ಹಾಗೂ ಮರಳು ತುಂಬಿ […]