ಅರ್ಜುನ ಆನೆ ಸಮಾಧಿ ಬೇಲಿ ಕಿತ್ತ ಕಾಡಾನೆಗಳು:

ಕಾಡಾನೆ ದಾಳಿಗೆ ಮೃತನಾದ ಅಂಬಾರಿಅರ್ಜುನನ ಸಮಾಧಿ ಬಳಿ ಕಾಡಾನೆಗಳು ದಾಂಧಲೆ ನಡೆಸಿರುವುದು ವರದಿಯಾಗಿದೆ. ಅರ್ಜುನನ ಸಮಾಧಿ ಸುತ್ತ ಹಾಕಿದ್ದ ತಂತಿಬೇಲಿಯನ್ನು ಮುರಿದಿರುವ ಗಜಪಡೆ ಸಮಾಧಿ ಬಳಿಯೆಲ್ಲಾ ಓಡಾಡಿವೆ. ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿ ದಬ್ಬಳ್ಳಿಕಟ್ಟೆ ಅರಣ್ಯ ಪ್ರದೇಶದಲ್ಲಿ ಮೃತನಾದ ಸ್ಥಳದಲ್ಲೇ ಅರ್ಜುನನ ಸಮಾಧಿ ಮಾಡಲಾಗಿದೆ. ತಾತ್ಕಾಲಿಕವಾಗಿ ಸಮಾಧಿ ಸುತ್ತ ಅರಣ್ಯ ಇಲಾಖೆ ಬೇಲಿ ಹಾಕಿತ್ತು. ಗುರುವಾರ ರಾತ್ರಿ ಈ ಸ್ಥಳಕ್ಕೆ ಆಗಮಿಸಿರುವ ಹಿಂಡು ಬೇಲಿ ನೆಲಸಮಗೊಳಿಸಿವೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅರ್ಜುನ […]
ಅರ್ಜುನ ಆನೆ ಸಾವಿಗೆ ನಾನು ಕಾರಣನಲ್ಲ: ವೈದ್ಯ ರಮೇಶ್ ಪ್ರತಿಕ್ರಿಯೆ

ಹಾಸನ: ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ದಸರಾ ಆನೆ ಅರ್ಜುನ ಸಾವು ಪ್ರಕರಣಕ್ಕೆ ಪರಿಸರಾಸಕ್ತರು ಹಾಗೂ ಮಾಧ್ಯಮದವರು ನಿಯೋಜಿತ ವೈದ್ಯ ಡಾ. ರಮೇಶ್ ಅವರನ್ನೇ ಹೊಣೆಯನ್ನಾಗಿಸಿ ವೈದ್ಯನ ತಪ್ಪು ನಿರ್ಧಾರಗಳಿಂದಲೇ ಅರ್ಜುನ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿದ್ದರು. ಕಾಡಾನೆ ಸೆರೆ ಸಮಯ ಅರ್ಜುನ ಆನೆಗೆ ಡಾರ್ಟ್ ಮಾಡಲಾಗಿತ್ತು, ಗುಂಡೇ ತಗುಲಿತ್ತು, ಇನ್ನೊಂದು ಆನೆಗೆ ಮಿಸ್ ಫೈರ್ ಆಗಿ ಅರಿವಳಿಕೆ ನೀಡಿದ್ದರು ಹೀಗೆ ಹತ್ತು ಹಲವು ಆರೋಪಗಳನ್ನ ಎದುರಿಸುತ್ತಿದ್ದ ವೈದ್ಯ ರಮೇಶ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ವೈದ್ಯರ ವಾದವೇನು..? ಕಾರ್ಯಾಚರಣೆ ದಿನ […]