ಕಾಡಾನೆ ದಾಳಿಗೆ ವ್ಯಕ್ತಿ ಮೃತ, ರಾತ್ರಿ ಪಾರ್ಟಿ ಮಾಡಿದ ಅರಣ್ಯ ಸಿಬ್ಬಂದಿ, ಆರೋಪ.

ಸೆ.೩ರ ಭಾನುವಾರದಂದು ಚಿಕ್ಕಮಗಳೂರಿನ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರೆನೂರು ಕುಂಚುಕಲ್ ರಸ್ತೆಯಲ್ಲಿ ರೈತರೊಬ್ಬರು ಆನೆದಾಳಿಗೆ ಮೃತರಾದರು. ಮೃತರ ಸಂಸ್ಕಾರ ಆಗಿ ಕೆಲ ಗಂಟೆಗಳಲ್ಲಿ ಅರಣ್ಯಾಧಿಕಾರಿಗಳು ಮಲಯಮಾರುತ ಗೆಸ್ಟ್‌ಹೌಸ್‌ನಲ್ಲಿ ಭರ್ಜರಿ ಬಾಡೂಟದ ಪಾರ್ಟಿ ಮಾಡಿರುವುದು ಜನರ ಕೋಪಕ್ಕೆ ಗುರಿಯಾಗಿದೆ. ಈ ಕುರಿತು ಚಿಕ್ಕಮಗಳೂರು ಮೂಲದ ಸುದ್ದಿವಾಹಿನಿ ಸುದ್ದಿ ಪ್ರಸಾರ ಮಾಡಿದ್ದು ಅಧಿಕಾರಿಗಳು ಕ್ಯಾಮೆರಾ ಎದುರು ಒಪ್ಪಿಕೊಂಡಿದ್ದಾರೆ. ಚಿಕ್ಕಮಗಳೂರಿನ ಮೂಡಿಗೆರೆ ಆನೆ ದಾಳಿಗೆ ಅತೀ ಹೆಚ್ಚು ಸಾವು ಕಂಡಿರುವ ತಾಲೂಕು. ಏನಿಲ್ಲ ಎಂದರು ಕಳೆದೆರಡು ವರ್ಷದಲ್ಲಿ ಕನಿಷ್ಟ ಆರು […]