ಆಗುಂಬೆಯೊಡಲಿನ ಜೋಗಿಗುಂಡಿ, ಎಚ್ವರ ತಪ್ಪಿದರೆ ಸಾವಿನಗುಂಡಿ.!

ಶಿವಮೊಗ್ಗದಲ್ಲಿ ಮಳೆ ಆರ್ಭಟ ಹೆಚ್ಚಿದೆ. ಕಾಡು-ಮೇಡು, ಗಿರಿ-ಶಿಖರಗಳೆಲ್ಲಾ ಜಲಧಾರೆಯಿಂದ ಬಸಿಯುತ್ತಿವೆ. ಜಲಾಶಯಗಳು ತುಂಬುವ ಆಶಾಭಾವನೆ ಮೂಡಿಸಿದೆ. ಹವಾಮಾನ ಇಲಾಖೆ ಇನ್ನೂ ಎರಡು ದಿನ ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಿದೆ. ಪ್ರವಾಸಿಗರೂ ಸಹ ನಿರೀಕ್ಷೆಗೂ ಮೀರಿ ಜಿಲ್ಲೆಯ ನಾನಾ ಪ್ರವಾಸಿತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ನಿಷೇಧಿತ ಅರಣ್ಯ ಪ್ರದೇಶದೊಳಗಿನ ಜಲಪಾತಗಳನ್ನ ಹುಡುಕಿ ಹುಚ್ಚಾಟ ಮಾಡುತ್ತಿದ್ದಾರೆ. ಪಶ್ಚಿಮ ಘಟ್ಟ ಸಾಲಿನ ಸುಂದರ ಊರು ಆಗುಂಬೆ. ಮಳೆ ಕಾಡಿನ ಸುಂದರ ಪರಿಸರದಲ್ಲಿ ಮಳೆಗೆ ಹತ್ತಾರು ಜಲಪಾತಗಳು ಗೋಚರವಾಗುತ್ತವೆ. ಗೋಂಡಾರಣ್ಯದ ಮಧ್ಯೆ ಇರುವ […]