ಹೆಣ್ಣು ಹುಲಿ ಮೃತ: ಸಾವು ಸ್ವಾಭಾವಿಕ

ಚಾಮರಾಜನಗರ: ವಿಷಯ: ದಿನಾಂಕ: 21-06-2024 ರ ಸಂಜೆ, ಕೊಳ್ಳೇಗಾಲ ವನ್ಯಜೀವಿ ವಲಯದ ಗುಂಡಾಲ್ ಶಾಖೆಯ ಲೊಕ್ಕನಹಳ್ಳಿ ಪಶ್ಚಿಮ ಗಸ್ತಿನ ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶದ, ದೊಡ್ಡಸಂಪಿಗೆ ಮೀಸಲು ಅರಣ್ಯದ ಸ್ಥಳೀಯವಾಗಿ ಕರೆಯಲ್ಪಡುವ ಬರಳ್ಳ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿಯವರು ಗಸ್ತು ಸಂದರ್ಭದಲ್ಲಿ ಒಂದು ಹುಲಿಯ ಮೃತದೇಹ ಕಂಡುಬಂದಿರುತ್ತದೆ. ಈ ವಿಚಾರವನ್ನು ಭಾರತ ಸರ್ಕಾರದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್.ಟಿ.ಸಿ.ಎ.) ರವರ ಎಸ್.ಓ.ಪಿ.ಯ ಅನುಗುಣವಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಕ್ರಮವಹಿಸಿರುತ್ತಾರೆ. ಇದರಂತೆ ದಿನಾಂಕ 22-06-2024 ರಂದು ಸದರಿ […]