ಗೋಪೂಜೆ ದಿನ ಚಿನ್ನದ ಸರ ನುಂಗಿದ್ದ ಹಸು ನಿತ್ರಾಣ, ಆಪರೇಷನ್ ಮಾಡಿ ಸರ ತೆಗೆದ ವೈದ್ಯ

ಗೋಪೂಜೆ ದಿನ ಬಂಗಾರದ ಸರ ನುಂಗಿದ್ದ ಹಸುವನ್ನ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿ ಪ್ರಾಣ ಉಳಿಸಿರುವ ಘಟನೆ ಹೊಸನಗರ ತಾಲೂಕು ಮತ್ತಿಮನೆ ಎಂಬಲ್ಲಿ ನಡೆದಿದೆ. ಇಲ್ಲಿನ ಶ್ಯಾಮ್ ಉಡುಪ ಎಂಬುವರ ಮನೆಯ ಹಸುವಿನ ಹೊಟ್ಟೆ ಸೇರಿದ್ದ ಹನ್ನೆರಡು ಗ್ರಾಂ, ಅಂದಾಜು ೭೦ ಸಾವಿರ ರೂಪಾಯಿ ಮೌಲ್ಯದ ಚಿನ್ನದ ಸರವನ್ನ ಹೊರ ತೆಗೆಯಲಾಗಿದೆ. ತೀರ್ಥಹಳ್ಳಿ ತಾಲೂಕು ಕೋಣಂದೂರು ಪಶುವೈದ್ಯ ಡಾ. ಆನಂದ್ ಜೀ ಎಂಬುವರು ಹಸುವಿಗೆ ಶಸ್ತ್ರಚಿಕಿತ್ಸೆ ಕೊಟ್ಟಿಗೆಯಲ್ಲೇ ಏರ್ಪಾಡು ಮಾಡಿ, ಹಸುವಿನ ಪ್ರಾಣವನ್ನೂ ಸಹ ಉಳಿಸಿರುವ ಶ್ರೇಯಕ್ಕೆ ಪಾತ್ರರಾಗಿದ್ದಾರೆ. […]