ಸಾಮಾಜಿಕ ಜಾಲತಾಣದಲ್ಲಿ ಚಾರಣ ದೃಶ್ಯ ವೈರಲ್, ಕ್ರಮಕ್ಕೆ ಸೂಚನೆ:

ದಕ್ಷಿಣ ಕನ್ನಡ ಜಿಲ್ಲೆ: ಕುಕ್ಕೆ ಸುಬ್ರಹ್ಮಣ್ಯ ದೇವರಗದ್ದೆಯ ಕುಮಾರ ಪರ್ವತ ಚಾರಣದ ಚೆಕ್ ಪೋಸ್ಟ್ ಬಳಿ ವಾರಾಂತ್ಯದಲ್ಲಿ ಸಾವಿರಾರು ಜನರು ಟ್ರೆಕ್ಕಿಂಗ್ (ಚಾರಣ)ಗೆ ಬಂದಿರುವ ದೃಶ್ಯಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದವು. ಪ್ಲಾಸ್ಟಿಕ್, ಕ್ಯಾರಿ ಬ್ಯಾಗ್ ಗಳು, ಬಾಟಲಿಗಳು ಕಾಡಿನಂಚಿನ ರಸ್ತೆಯ ಎರಡೂ ಬದಿ ರಾಶಿ ಬಿದ್ದಿವೆ ಎಂಬ ವರದಿ ಆಘಾತಕಾರಿಯಾಗಿತ್ತು. ಇದನ್ನ ಗಮನಿಸಿರುವ ಅರಣ್ಯ ಹಾಗೂ ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಕ್ರಮಕ್ಕೆ ಆದೇಶಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿ, ಈ ಘಟನೆ […]