ಸಾಗರ ವಿಭಾಗದಲ್ಲಿ ಕಾಡುಕೋಣಗಳ ನಿರಂತರ ಹತ್ಯೆ.!

ಪಶ್ಚಿಮಘಟ್ಟ ಸಾಲಿನಲ್ಲಿ ಕಂಡು ಬರುವ ವಿಶಿಷ್ಟ ಪ್ರಾಣಿ ಪ್ರಬೇಧ ಕಾಡೆಮ್ಮೆ/ ಕಾಡುಕೋಣಗಳು ನಿರುಪದ್ರವಿಗಳು. ಜನ ನಿಬಿಡ ಸ್ಥಳದಲ್ಲೂ ನಿರ್ಭಯವಾಗಿ ಓಡಾಡುವ ಈ ಪ್ರಬೇಧ ಮಾಂಸದ ದಾಹಕ್ಕೆ ಕ್ಷೀಣಿಸುತ್ತಿದೆ. ಮಲೆನಾಡಿನ ಕೆಲ ಸಮುದಾಯಗಳು ಸುಧಾರಿತ ಬಂದೂಕಿನಲ್ಲಿ ಅವ್ಯಾಹತವಾಗಿ ಬೇಟೆಯಾಡುತ್ತಿವೆ. ಶಿವಮೊಗ್ಗ ಜಿಲ್ಲೆ ಸಾಗರ ಅರಣ್ಯ ವಿಭಾಗದಲ್ಲಿ ಒಂದು ವರ್ಷದಲ್ಲಿ ಹತ್ತಾರು ಕಾಡೆಮ್ಮೆ-ಕಾಡುಕೋಣಗಳು ಹೀಗೇ ಬಲಿಯಾಗಿವೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಹುಂಚ ಹೋಬಳಿ ನಾಗರಹಳ್ಳಿ ಗ್ರಾಮದಲ್ಲಿ ಕಾಡುಕೋಣಗಳ ಮೂಳೆಗಳು ದೊರತಿದ್ದು ಆತಂಕಕ್ಕೀಡು ಮಾಡಿದೆ. ಈ ಭಾಗದಲ್ಲಿ ಗುಂಪಾಗಿ ಓಡಾಡುತ್ತಿದ್ದ […]
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಶರಾವತಿ ನೀರಿಗೆ ದಾಹ.! ಶಶಿ ಸಂಪಳ್ಳಿ

ಹಿರಿಯ ಪತ್ರಕರ್ತರು ಹಾಗೂ ಲೇಖಕರು ಆದ ಶಶಿ ಸಂಪಳ್ಳಿಯವರು ಫೇಸ್ ಬುಕ್ ಲ್ಲಿ ಅಭಿಪ್ರಾಯ ಮಂಡಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲಾ ಮಲೆನಾಡಿಗೆ ಈ ಕಂಟಕ ಎದುರಾಗ್ತಿದೆ. ಈ ಪಕ್ಷಕ್ಕೂ ಮಲೆನಾಡಿನ ನೆಮ್ಮದಿಗೂ ಯಾಕೋ ಆಗಿಬರ್ತಿಲ್ಲ ಅನಿಸ್ತಿದೆ. ಕಳೆದ ಬಾರಿ 2019ರಲ್ಲಿ ಇವರದೇ ಸಮ್ಮಿಶ್ರ ಸರ್ಕಾರದಲ್ಲಿ ಡಾ ಜಿ ಪರಮೇಶ್ವರ್ ಈ ಬಗ್ಗೆ ಡಿಪಿಆರ್ ಗೆ ಸೂಚಿಸಿದ್ದರು. ಆಗ ಇಡೀ ಶಿವಮೊಗ್ಗ ಜಿಲ್ಲೆ ಮತ್ತು ಉತ್ತರಕನ್ನಡದ ಶರಾವತಿ ಕೊಳ್ಳದ ತಾಲೂಕುಗಳಲ್ಲಿ ಜನ ಸಿಡಿದೆದ್ದಿದ್ದರು. ಆದರೂ ಸುಮಾರು ಒಂದು ತಿಂಗಳ […]
ಆನೆಗಳ ಕುರುಹುಗಳೇ ಇಲ್ಲದ ವಲಯಕ್ಕೂ ಆಗಮಿಸುತ್ತಿವೆ ಕಾಡಾನೆಗಳು.

ಶಿಕಾರಿಪುರ: ಹಿಂದೆಂದೂ ಆನೆಗಳ ಇರುವಿಕೆಯೇ ಇರದ ಸ್ಥಳಗಳಲ್ಲೂ ಆನೆಗಳು ಸಂಚರಿಸುತ್ತಿರುವುದು ಮಲೆನಾಡಿನ ರೈತರ ನಿದ್ದೆಗೆಡಿಸಿದೆ. ಎರಡು ಕಾಡಾನೆಗಳು ಮರಿಯೊಂದಿಗೆ ಶಿಕಾರಿಪುರ-ಸಾಗರದಂಚಿನ ಅಂಬ್ಲಿಗೋಳ ( ಅಂಬ್ಳಿಗೋಳ ) ವಲಯ ಅರಣ್ಯ ವ್ಯಾಪ್ತಿಯ ರೈತರ ಹೊಲಗಳಲ್ಲಿ ಹಾವಳಿ ನಡೆಸಿವೆ. ವಿರಳ ಕಾಡು ಪ್ರದೇಶದ ಈ ಹಳ್ಳಿಗಳಲ್ಲಿ ಆನೆ ವಾಸಿಸಬಲ್ಲ ಸಸ್ಯವರ್ಗವೇ ಇಲ್ಲ ಆದರೂ ಸಹ ಮೊದಲ ಸಲ ಇಂತಹ ಜನನಿಬಿಡ ಪ್ರದೇಶಕ್ಕೆ ಆನೆಗಳು ಬಂದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಎರಡು ದಿನಗಳಿಂದ ರಾತ್ರೋರಾತ್ರಿ ಶಿಕಾರಿಪುರ ತಾಲೂಕಿನ ಎರೆಕೊಪ್ಪ, ಗೊಬ್ಬರದ ಹೊಂಡದಿಂದ ಸಾಲೂರುವರೆಗೆ […]
ಆರು ದಶಕ ನೀರಲ್ಲಿದ್ದರೂ ನಶಿಸದ ಮಡೆನೂರು ಹಿರೇಭಾಸ್ಕರ ಅಣೆಕಟ್ಟು..!

ಬ್ರಿಟೀಷ್ ಇಂಡಿಯಾ ಸಮಯದಲ್ಲಿ ಜಲಾಶಯ, ಅಣೆಕಟ್ಟು, ಒಡ್ಡುಗಳನ್ನ ಹೇಗೆ ನಿರ್ಮಾಣ ಮಾಡುತ್ತಿದ್ದರು ಎಂಬ ಕೌತುಕ ಸಾಕಷ್ಟು ಜನರಲ್ಲಿರುತ್ತೆ. ಇಂದಿನಂತೆ ಕಾಂಕ್ರೀಟ್ ಬಳಸಿ ಕಟ್ಟುತ್ತಿರಲಿಲ್ಲ. ಉದ್ಘಾಟನೆಗೆ ಮುನ್ನವೇ ಉದುರಿ ಬೀಳುತ್ತಲೂ ಇರಲಿಲ್ಲ. ಇಂತಹದೊಂದು ಅದ್ಭುತ ಅಣೆಕಟ್ಟೊಂದು ಆರು ದಶಕಗಳ ಕಾಲ ನೀರಿನಲ್ಲೇ ಮುಳುಗಿದೆ. ಗಟ್ಟುಮುಟ್ಟಾಗಿಯೂ ಇದೆ ಎಂದರೆ ಎಂಥವರಿಗೂ ಅಚ್ಛರಿ ಎನಿಸದೇ ಇರದು. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶರಾವತಿ ನದಿಯಲ್ಲಿ ಎಂಟು ದಶಕದ ಅಣೆಕಟ್ಟಿದೆ, ಇದಕ್ಕೆ ಮಡೆನೂರು ಹಿರೇಭಾಸ್ಕರ ಎಂದು ಹೆಸರು. ಶರಾವತಿ ವನ್ಯಜೀವಿ ಸಂರಕ್ಷಿತ ವಲಯದೊಳಗೆ […]