ಪ್ರವಾಸಿಗರ ಹುಚ್ಚಾಟ, ಆನೆಯಿಂದ ಬಿದ್ದ ಕಾವಾಡಿ, ಸಕ್ರೆಬೈಲ್ ಸರ್ಕಸ್ ಕಂಪನಿ ಆಗುತ್ತಿದೆಯೇ..?

ಶಿವಮೊಗ್ಗ: ಶಿವಮೊಗ್ಗದಿಂದ ಹದಿನೈದು ಕಿಲೋಮೀಟರ್ ಕ್ರಮಿಸಿದರೆ ಸಿಗುವ ಸಕ್ರೆಬೈಲು ಆನೆ ಬಿಡಾರ ಮಲೆನಾಡಿನ ಪ್ರಸಿದ್ಧ ಪ್ರವಾಸಿ ತಾಣ. ನಾನಾ ಕಾರಣಗಳಿಂದ ಸದಾ ಸುದ್ದಿಯಲ್ಲಿರುತ್ತೆ. ಇತ್ತೀಚೆಗಷ್ಟೇ ಇಲ್ಲಿನ ಹೊಣೆಗೇಡಿ ವೈದ್ಯನೊಬ್ಬ ಗರ್ಭಿಣಿ ಆನೆಯನ್ನ ದಸರಾ ಮೆರವಣಿಗೆ ಅಣಿಗೊಳಿಸಿ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆನೆ ಅಂಬಾರಿ ಹೊರುವ ಮುನ್ನಾ ದಿನ ಮರಿ ಹಾಕಿದರೂ ಅರಣ್ಯ ಇಲಾಖೆಯೊಳಗಿನ ಪ್ರಾಬಲ್ಯದಿಂದ ಈ ವೈದ್ಯ ಇನ್ನೂ ಉಳಿದುಕೊಂಡಿದ್ದಾನೆ. ಇದೇ ಕ್ಯಾಂಪಿನ ಇನ್ನೊಂದು ಗರ್ಭಿಣಿ ಆನೆಯ ಬಾಲವನ್ನ ಬಿಡಾರದ ಒಳಗೋ-ಹೊರಗೋ ಇರುವ ಕಿಡಿಗೇಡಿಗಳು ಅರ್ಧ ತುಂಡರಿಸಿದ್ದರು. […]
ಆನೆ ಕರೆಸಿ ಚಿರತೆ ಓಡಿಸ್ತೀನಿ, ಅರಣ್ಯ ಸಚಿವರ ಪತ್ರಿಕಾಗೋಷ್ಠಿಯಲ್ಲಿ ವಿನೋದ..!

ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿಂದ ಅರ್ಜುನಾ ಹಾಗೂ ಆಲೆ ಎಂಬ ಎರಡು ಆನೆಗಳು ಅರಣ್ಯ ಸಚಿವ ಉಮೇಶ ಕತ್ತಿ ಆದೇಶದ ಮೇರೆಗೆ ಬೆಳಗಾವಿಯಲ್ಲಿ ಚಿರತೆ ಬೆನ್ನಟ್ಟಲು ತೆರಳಿವೆ. ಬೆಳಗಾವಿಯಲ್ಲಿ ಸೋಮವಾರ ಅರಣ್ಯ ಇಲಾಖೆ ಸಭಾಂಗಣದಲ್ಲಿ ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸಭೆ ನಡೆಸಿ ಬಳಿಕ ಅರಣ್ಯ ಸಚಿವ ಕತ್ತಿ ಮಾತನಾಡಿ, ಚಿರತೆ ಸಮಸ್ಯೆ ಬಗ್ಗೆ ಪತ್ರಕರ್ತರೊಂದಿಗೆ ವಿನೋದದಿಂದ ಮಾತನಾಡಿದರು.ಕಳೆದ 20 ದಿನಗಳಿಂದ ಬೆಳಗಾವಿ ಜಿಲ್ಲೆಯ ನಾಲ್ಕು ಕಡೆ ಚಿರೆತೆ ಹಾವಳಿ ಕಂಡು ಬಂದಿತ್ತು. ಚಿಕ್ಕೋಡಿಯಲ್ಲಿ ಭಾಗದಲ್ಲಿ ಕಂಡು […]