ದತ್ತಪೀಠದ ಶಾಖಾದ್ರಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ..!

ಕಾಫಿನಾಡಲ್ಲಿ ಗೌಸ್ ಮೊಹಿನುದ್ದಿನ್ ಶಾಖಾದ್ರಿಯನ್ನ ಬಂಧಿಸ್ತಾರಾ ಪೊಲೀಸರು.? ಹೀಗೊಂದು ಆತಂಕ ಗೌಸ್ ಬೆಂಬಲಿಗರಿಗೆ ಕಾಡಿದೆ. ಮನೆಯಲ್ಲಿ ಜಿಂಕೆ, ಚಿರತೆ ಚರ್ಮ ಹೊಂದಿದ್ದ ಆರೋಪದ ಮೇಲೆ ದತ್ತಪೀಠದ ಶಾಖಾದ್ರಿ ಗೌಸ್ ಮೊಹೀನುದ್ದಿನ್ ಶಾಖಾದ್ರಿ ಮೇಲೆ FIR ದಾಖಲಾಗಿತ್ತು. ಶಾಖಾದ್ರಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನ ಚಿಕ್ಕಮಗಳೂರಿನ ಸೆಷನ್ ಕೋರ್ಟ್ ವಜಾ ಮಾಡಿದೆ. ಶಾಖಾದ್ರಿಯನ್ನ ಬಂಧಿಸುತ್ತಾರಾ ಕಾಫಿನಾಡ ಪೊಲೀಸರು…? ಅಕ್ಟೋಬರ್ 27ರಂದು ಶಾಖಾದ್ರಿ ಮನೆಯನ್ನ ತಪಾಸಣೆ ನಡೆಸಿದ್ದ ಅರಣ್ಯ ಅಧಿಕಾರಿಗಳು, ಮನೆಯಲ್ಲಿ ಚಿರತೆ ಹಾಗೂ ಜಿಂಕೆ ಚರ್ಮ ವಶಕ್ಕೆ ಪಡೆದಿದ್ದರು. […]