ಚಿರತೆಯೊಂದಿಗೆ ಸೆಲ್ಫಿ, ಮೈ ಪರಚಿಕೊಂಡ ಯುವಕ

ಮೈಸೂರು: ಸೆರೆಯಾದ ಚಿರತೆ ಜತೆ ಸೆಲ್ಫಿಗೆ ಯತ್ನಿಸಿದ ಯುವಕ ಮೈ ಪರಚಿಕೊಂಡು ಆಸ್ಪತ್ರೆ ಸೇರಿದ ಘಟನೆ ನಂಜನಗೂಡು ತಾಲೂಕಿನ ಯಾಲಹಳ್ಳಿಯಲ್ಲಿ ನಡೆದಿದೆ. ಬಹಳ ದಿನಗಳಿಂದ ಈ ಭಾಗದಲ್ಲಿ ಕಾಣಿಸಿಕೊಂಡು ಉಪಟಳ ನೀಡುತ್ತಿದ್ದ ಚಿರತೆಯನ್ನ ಗ್ರಾಮಸ್ಥರು, ಊರಿನ ಮಹದೇವಪ್ಪ ಎಂಬುವರಿಗೆ ಸೇರಿದ ಪಾಳು ಬಿದ್ದ ಮನೆಯಲ್ಲಿ ಕೂಡಿ ಹಾಕಿದ್ದರು.ತಕ್ಷಣ ಸ್ಥಳಕ್ಕೆ ಆಗಮಿಸಿದ್ದ ವಲಯ ಅರಣ್ಯಾಧಿಕಾರಿ ನಿತಿನ್ ಕುಮಾರ್, ಜನಾರ್ಧನ್ ತಂಡಸುಮಾರು ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಅರಿವಳಿಕೆ ಚುಚ್ಚುಮದ್ದು ನೀಡಿ ಚಿರತೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಸಹಜವಾಗಿ ಚಿರತೆ […]
ಹೆಚ್.ಡಿ ಕೋಟೆಯಲ್ಲಿ ಹುಲಿ ಸೆರೆ, ಬಾಲಕನನ್ನ ಕೊಂದಿದ್ದು ಇದೇನಾ.?
ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ಕಲ್ಲಹಟ್ಟಿ ಗ್ರಾಮದಲ್ಲಿ ಅರಣ್ಯ ಇಲಾಖೆ ಹುಲಿ ಸೆರೆಹಿಡಿದಿದ್ದು, ವಾರಗಳ ಹಿಂದೆ ಬಾಲಕನನ್ನ ಬಲಿ ತೆಗೆದುಕೊಂಡಿದ್ದ ನರಭಕ್ಷಕ ಹುಲಿ ಇದೇನಾ ಎಂಬ ಅನುಮಾನ ಮೂಡಿದೆ. ಹೆಚ್ ಡಿ ಕೋಟೆ ತಾಲೂಕು ಸಿದ್ದಾಪುರ ಗ್ರಾಮದಲ್ಲಿ ಎಂಟು ವರ್ಷದ ಗಂಡು ಹುಲಿಯನ್ನ ಅರಣ್ಯಾಧಿಕಾರಿಗಳು ಮಂಗಳವಾರ ಸೆರೆ ಹಿಡಿದಿದ್ದಾರೆ. ಮೇಟಿಕುಪ್ಪೆ ವಲಯ ಅರಣ್ಯಾಧಿಕಾರಿಗಳು, ವನ್ಯಜೀವಿ ತಜ್ಞ, ವೈದ್ಯ ರಮೇಶ್ ನೇತೃತ್ವದಲ್ಲಿ ಸಾಕಾನೆಗಳ ಮೂಲಕ ಕಾರ್ಯಾಚಾರಣೆ ನಡೆಸಿ, ಹುಲಿ ಜಾಡು ಹಿಡಿದು ಅರಿವಳಿಕೆ ಚುಚ್ಚು ಮದ್ದು ನೀಡಿದ್ದಾರೆ. […]
ಚಿರತೆಗಳ ದಾಳಿಗೆ ಮೈಸೂರು ಜಿಲ್ಲಾಡಳಿತ ಹೈರಾಣು, ಕಬ್ಬು ಕಟಾವಿಗೆ ಆದೇಶ

ಮೈಸೂರು ಜಿಲ್ಲೆ, ಟಿ-ನರಸೀಪುರ ತಾಲ್ಲೂಕಿನಲ್ಲಿ ಒಂದೇ ತಿಂಗಳಿಗೆ ಇಬ್ಬರು ವಿದ್ಯಾರ್ಥಿಗಳು ಚಿರತೆಗಳಿಗೆ ಬಲಿಯಾಗಿದ್ದಾರೆ. ತಾಲ್ಲೂಕಿನಾದ್ಯಂತ ಚಿರತೆಗಳ ಹಾವಳಿ ಹೆಚ್ಚಾಗಿದ್ದು ಈ ಭಾಗದಲ್ಲಿಸಕಾಲದಲ್ಲಿ ಕಬ್ಬು ಕಟಾವು ಮಾಡುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಹೊರಡಿಸಿದ ಆದೇಶದಲ್ಲೇನಿದೆ..? ಟಿ ನರಸೀಪುರ ತಾಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು ಈ ವಲಯದ ವ್ಯಾಪ್ತಿಯ ಸೂಸಲು ಹೋಬಳಿ ಎಂಎಲ್ ಹುಂಡಿ ಗ್ರಾಮದ ವಾಸಿ, ಮಂಜುನಾಥ್ ಚನ್ನಮಲ್ಲದೇವರು ಎಂಬುವರು ಚಿರತೆ ದಾಳಿಯಿಂದ ಅಕ್ಟೋಬರ್ 31 ರಂದು ಮೃತಪಟ್ಟಿರುತ್ತಾರೆ.ಸದರಿ ವ್ಯಾಪ್ತಿಯ ಎಸ್ ಕೆಂಪೇ […]
ಆದಿವಾಸಿ ವ್ಯಕ್ತಿ ಸಾವು: ಅರಣ್ಯ ಇಲಾಖೆ 17 ಸಿಬ್ಬಂದಿ ವಿರುದ್ಧ FIR:

ಬಂಡೀಪುರ ಅರಣ್ಯ ವಲಯದ ಗುಂಡ್ರೆ ರೇಂಜ್ ನಲ್ಲಿ ಆದಿವಾಸಿ ವ್ಯಕ್ತಿ ಅರಣ್ಯಾಧಿಕಾರಿಗಳ ವಶದಲ್ಲಿದ್ದ ವೇಳೆ ಮೃತಪಟ್ಟ ಘಟನೆಗೆ ಸಂಬಂಧಿಸಿದಂತ ಸರಗುರ್ ಪೊಲೀಸರು 17 ಮಂದಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕೇಸು ದಾಖಲಿಸಿದ್ದಾರೆ. ಎಸ್ ಸಿ/ಎಸ್ ಟಿ ವಿರುದ್ಧ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ. ಪೊಲೀಸರು ದಾಖಲಿಸಿದ ಎಫ್‌ಐಆರ್ ನಲ್ಲಿ, ಪ್ರಕರಣದಲ್ಲಿ ರೇಂಜ್ ಫಾರೆಸ್ಟ್ ಆಫೀಸರ್ ಅಮೃತೇಶ್, ಉಪ ವಲಯ ಅರಣ್ಯಾಧಿಕಾರಿ ಕಾರ್ತಿಕ್ ಯಾದವ್, ಇಬ್ಬರು ಅರಣ್ಯಾಧಿಕಾರಿಗಳು ಮತ್ತು ಇತರ 13 ಜನರ ವಿರುದ್ಧ […]