ಬೆಂಗಳೂರಿನಲ್ಲಿ ಮುಂದುವರಿದಿದೆ ಅರಣ್ಯ ಒತ್ತುವರಿ ತೆರವು.

ಬೆಂಗಳೂರಿನಲ್ಲಿ ಮತ್ತೊಂದು ಒತ್ತುವರಿ ತೆರವು ಕಾರ್ಯಾಚರಣೆ: ಜಾರಕಬಂಡೆ ಕಾವಲ್ ನಲ್ಲಿ 15 ಎಕರೆ ಅರಣ್ಯ ಭೂಮಿ ಮರುವಶ ಬೆಂಗಳೂರು, ಜ.5: ಬೆಂಗಳೂರು ನಗರದ ಜಾರಕಬಂಡೆ ಕಾವಲ್ ಶ್ರೀಗಂಧದ ಮೀಸಲು ಅರಣ್ಯದ ಸರ್ವೆ ನಂ. 18 ಮತ್ತು 19ರಲ್ಲಿ 15 ಎಕರೆ ಅರಣ್ಯ ಭೂಮಿಯನ್ನು ಇಂದು ಮರು ವಶಕ್ಕೆ ಪಡೆಯಲಾಗಿದೆ.2017ರಲ್ಲೇ ಸದರಿ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು ಎಂದು ತೀರ್ಪು ನೀಡಲಾಗಿತ್ತು. ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಬೆಂಗಳೂರು ಸುತ್ತಮುತ್ತ ಬೆಲೆಬಾಳುವ ಅರಣ್ಯ […]