ಇಬ್ಬರ ಬಲಿ ಪಡೆದಿದ್ದ ಸೀಗೆ ಹೆಸರಿನ ಒಂಟಿ ಸಲಗ ಸೆರೆ

ಹಾಸನ :ಮೂರನೇ ದಿನದ ಪುಂಡಾನೆ ಸೆರೆ ಕಾರ್ಯಾಚರಣೆ ಯಶಸ್ವಿಯಾಗಿದ್ದು ಮತ್ತೊಂದು ದೈತ್ಯಾಕಾರದ ನರಹಂತಕ ಕಾಡಾನೆ ಸೆರೆಯಾಗಿದೆ. ಸಕಲೇಶಪುರ ತಾಲ್ಲೂಕಿನ, ಹೆತ್ತೂರು ಹೋಬಳಿ ನಿಡಿಗೆರೆ ಫಾರೆಸ್ಟ್ನಲ್ಲಿ ಸೀಗೆ ಹೆಸರಿನ ಒಂಟಿಸಲಗವನ್ನು ಅರಣ್ಯ ಇಲಾಖೆ ತಂಡ ಸೆರೆ ಹಿಡಿದಿದೆ. ಶನಿವಾರ ಮಧ್ಯಾಹ್ನ ಏಳು ಕಾಡಾನೆಗಳೊಂದಿಗೆ ಸೆರೆ ಹಿಡಿಯುವ ಕಾರ್ಯಾಚರಣೆಯನ್ನ ಆಪರೇಷನ್ ಎಲಿಫೆಂಟ್ ಟೀಂ ಆರಂಭಿಸಲಾಗಿತ್ತು. ಆದರೆ ಸೀಗೆ ಕಾಡಾನೆ ಕಾಡಿನೊಳಗೆ ಸೇರಿಕೊಂಡಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರ ಬೆಳಿಗ್ಗೆಯಿಂದಲೇ ಸೀಗೆಯನ್ನ ಟ್ರ್ಯಾಕ್ ಮಾಡುತ್ತಿದ್ದರು. ನಿಡಿಗೆರೆ ಅರಣ್ಯ ಪ್ರದೇಶದಲ್ಲಿ […]