ತನ್ನೀರ್ ಕೊಂಬನ್ ಸಾವಿಗೆ ಖಂಡ್ರೆ ಸಂತಾಪ, ಅಧಿಕಾರಿಗಳ ವಿರುದ್ಧ ಪರಿಸರಾಸಕ್ತರು ಕೆಂಡ

ಕೇರಳದಲ್ಲಿ ಸೆರೆ ಹಿಡಿದು ಶುಕ್ರವಾರ ಮಧ್ಯರಾತ್ರಿ ಬಂಡೀಪುರಕ್ಕೆ ಮರಳಿ ತಂದ ತನ್ನೀರ್ ಕೊಂಬನ್ ಎಂಬ ಹೆಸರಿನ ಕಾಡಾನೆಯ ಸಾವಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಘಟನೆ ಅತ್ಯಂತ ದುರದೃಷ್ಟಕರ ಎಂದ ಸಚಿವರು, ವನ್ಯಜೀವಿಗಳ ಹಿತದೃಷ್ಟಿಯಿಂದ ಯಾವುದೇ ವನ್ಯಜೀವಿಯನ್ನು ಇಂತಹ ರಾಜ್ಯಕ್ಕೆ ಸೇರಿದ್ದು ಎಂದು ಸೀಮಿತಗೊಳಿಸುವುದು ಸರಿ ಅಲ್ಲ ಎಂದು ಹೇಳಿದ್ದಾರೆ. ಅರಣ್ಯ ವನ್ಯಜೀವಿಗಳ ಆವಾಸಸ್ಥಾನವಾಗಿದೆ. ವನ್ಯ ಜೀವಿಗಳು ಅಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತವೆ. ಆನೆಗಳು ಕೂಡ ತಮಿಳುನಾಡು, ಕೇರಳ, […]