ಕಾಡು ಬೆಕ್ಕು ಬೇಟೆಗೆಂದು ಜಿಗಿದು ವಿದ್ಯುತ್ ಶಾಕ್ ನಿಂದ ಕಂಬದ ಮೇಲೆ ಒರಗಿದ ಚಿರತೆ.

ಮೂರು ವರ್ಷ ಪ್ರಾಯದ ಚಿರತೆಯೊಂದು ಕಾಡು ಬೆಕ್ಕನ್ನು ಹಿಡಿಯಲು ಹೋಗಿ ವಿದ್ಯುತ್ ಶಾಕ್ ಗೆ ಮೃತಪಟ್ಟಿದೆ. ಆಹಾರ ಅರಸಿ ಕಂಬ ಏರಿದ ಪರಿಣಾಮ ಚಿರತೆ ಜೊತೆ ಕಾಡು ಬೆಕ್ಕು ಮೃತಪಟ್ಟಿದ್ದು ಉತ್ತರ ಕನ್ನಡ ಜಿಲ್ಲೆ, ಶಿರಸಿ ತಾಲೂಕಿನ ನೀರ್ನಳ್ಳಿ ಬಳಿಯ ಹುಡ್ಲಮನೆ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ. ನೀರ್ನಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಹಲವು ತಿಂಗಳಿಂದ ಚಿರತೆ ಓಡಾಟ ನಡೆಸುತಿತ್ತು. ತನ್ನ ಬೇಟೆ ಅರಸಿ ಹೋದ ಸಂದರ್ಭದಲ್ಲಿ ಕಾಡು ಬೆಕ್ಕು ಕಂಡಿದೆ. ಅಟ್ಟಿಸಿಕೊಂಡು ಹೋದಾಗ ಕಾಡು ಬೆಕ್ಕು ವಿದ್ಯುತ್ […]
ಚಿರತೆಗಳು ನರಭಕ್ಷಕಗಳಾ..?

ಇಡೀ ರಾಜ್ಯಾದ್ಯಂತ ಚಿರತೆಗಳ ದಾಳಿಗೆ ಹೈರಾಣಾಗಿದ್ದಾರೆ. ಶಿವಮೊಗ್ಗವು ಸಹ ಇದರಿಂದ ಹೊರತಾಗಿಲ್ಲ. ಪಶ್ಚಿಮ ಘಟ್ಟ ಸಾಲಿನ ಪ್ರಮುಖ ಜಿಲ್ಲೆಯಾಗಿರುವ ಶಿವಮೊಗ್ಗ ವಿಪರೀತ ಅರಣ್ಯ ನಾಶದಿಂದ ಪ್ರಾಣಿ ಸಂಕುಲಕ್ಕೆ ಕಂಟಕ ಪ್ರಾಯ ವಾತಾವರಣ ಸೃಷ್ಟಿಸಿದೆ. ಆರು ತಿಂಗಳಿನಲ್ಲಿ ನಾಲ್ಕು ಚಿರತೆಗಳು ಸಾವನ್ನಪ್ಪಿವೆ. ಬಹುತೇಕ ಚಿರತೆಗಳು ಜನರು ಹಾಕಿದ ಉರುಳಿಗೆ ಬಲಿಯಾಗಿವೆ. ಮಂಡಗದ್ದೆ, ಚೋರಡಿ, ಕೊಮ್ಮನಾಳು, ಭದ್ರಾವತಿ ಭಾಗದಲ್ಲಿ ಚಿರತೆ ಉಪಟಳ ಹೆಚ್ಚಾಗಿವೆ. ಶಿವಮೊಗ್ಗದಲ್ಲೂ ಚಿರತೆ ಸಂತತಿ ಹೆಚ್ಚಾಗಿದೆಯಾ..? ಕಾಡು ಸಂಕುಚಿತ ಆಗಿದೆಯಾ..? ಚಿರತೆ ನರಭಕ್ಷಕ ಪ್ರಾಣಿಯೇ..? ಜನರು ಚಿರತೆಗಳಿಗೆ […]
ಚಿರತೆಗಳ ದಾಳಿಗೆ ಮೈಸೂರು ಜಿಲ್ಲಾಡಳಿತ ಹೈರಾಣು, ಕಬ್ಬು ಕಟಾವಿಗೆ ಆದೇಶ

ಮೈಸೂರು ಜಿಲ್ಲೆ, ಟಿ-ನರಸೀಪುರ ತಾಲ್ಲೂಕಿನಲ್ಲಿ ಒಂದೇ ತಿಂಗಳಿಗೆ ಇಬ್ಬರು ವಿದ್ಯಾರ್ಥಿಗಳು ಚಿರತೆಗಳಿಗೆ ಬಲಿಯಾಗಿದ್ದಾರೆ. ತಾಲ್ಲೂಕಿನಾದ್ಯಂತ ಚಿರತೆಗಳ ಹಾವಳಿ ಹೆಚ್ಚಾಗಿದ್ದು ಈ ಭಾಗದಲ್ಲಿಸಕಾಲದಲ್ಲಿ ಕಬ್ಬು ಕಟಾವು ಮಾಡುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಹೊರಡಿಸಿದ ಆದೇಶದಲ್ಲೇನಿದೆ..? ಟಿ ನರಸೀಪುರ ತಾಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು ಈ ವಲಯದ ವ್ಯಾಪ್ತಿಯ ಸೂಸಲು ಹೋಬಳಿ ಎಂಎಲ್ ಹುಂಡಿ ಗ್ರಾಮದ ವಾಸಿ, ಮಂಜುನಾಥ್ ಚನ್ನಮಲ್ಲದೇವರು ಎಂಬುವರು ಚಿರತೆ ದಾಳಿಯಿಂದ ಅಕ್ಟೋಬರ್ 31 ರಂದು ಮೃತಪಟ್ಟಿರುತ್ತಾರೆ.ಸದರಿ ವ್ಯಾಪ್ತಿಯ ಎಸ್ ಕೆಂಪೇ […]
ಆನೆ ಕರೆಸಿ ಚಿರತೆ ಓಡಿಸ್ತೀನಿ, ಅರಣ್ಯ ಸಚಿವರ ಪತ್ರಿಕಾಗೋಷ್ಠಿಯಲ್ಲಿ ವಿನೋದ..!

ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿಂದ ಅರ್ಜುನಾ ಹಾಗೂ ಆಲೆ ಎಂಬ ಎರಡು ಆನೆಗಳು ಅರಣ್ಯ ಸಚಿವ ಉಮೇಶ ಕತ್ತಿ ಆದೇಶದ ಮೇರೆಗೆ ಬೆಳಗಾವಿಯಲ್ಲಿ ಚಿರತೆ ಬೆನ್ನಟ್ಟಲು ತೆರಳಿವೆ. ಬೆಳಗಾವಿಯಲ್ಲಿ ಸೋಮವಾರ ಅರಣ್ಯ ಇಲಾಖೆ ಸಭಾಂಗಣದಲ್ಲಿ ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸಭೆ ನಡೆಸಿ ಬಳಿಕ ಅರಣ್ಯ ಸಚಿವ ಕತ್ತಿ ಮಾತನಾಡಿ, ಚಿರತೆ ಸಮಸ್ಯೆ ಬಗ್ಗೆ ಪತ್ರಕರ್ತರೊಂದಿಗೆ ವಿನೋದದಿಂದ ಮಾತನಾಡಿದರು.ಕಳೆದ 20 ದಿನಗಳಿಂದ ಬೆಳಗಾವಿ ಜಿಲ್ಲೆಯ ನಾಲ್ಕು ಕಡೆ ಚಿರೆತೆ ಹಾವಳಿ ಕಂಡು ಬಂದಿತ್ತು. ಚಿಕ್ಕೋಡಿಯಲ್ಲಿ ಭಾಗದಲ್ಲಿ ಕಂಡು […]