ಭರಚುಕ್ಕಿಯಲ್ಲಿ ಹುಚ್ಚಾಟವಾಡಿದರೆ ಬಸ್ಕಿ, ಹುಷಾರ್.!!

ಕೊಳ್ಳೇಗಾಲ: ತಾಲೂಕಿನ ಶಿವನಮುದ್ರದ ಭರಚುಕ್ಕಿ ಜಲಪಾತ ಭೋರ್ಗರೆದು ಧುಮ್ಮಿಕ್ಕುತ್ತಿದೆ. ಜಲಪಾತದ ವೈಭವವನ್ನು ನೋಡಲು ಪ್ರವಾಸಿಗರ ದಂಡೇ ಆಗಮಿಸುತ್ತಿದೆ. ಜಲಪಾತ ತುತ್ತ ತುದಿಯಲ್ಲಿ ನಿಂತು ಫೋ ಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಹುಚ್ಚಾಟ ಮೆರೆಯುತ್ತಿದ್ದವರಿಗೆ ಭಾನುವಾರ ಪೊಲೀಸರು ಬಸ್ಕಿ ಹೊಡಿಸಿ ಬಿಸಿ ಮುಟ್ಟಿಸಿದ್ದಾರೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಅಧಿಕ ಮಳೆ ಯಾಗಿರುವ ಹಿನ್ನಲೆ ಕಾವೇರಿ ಮೈದುಂಬಿ ಹರಿಯುತ್ತಿದೆ. ಸತ್ತೇಗಾಲ ಸಮೀಪವಿರುವ ಶಿವನಸಮುದ್ರ ಗ್ರಾಮದ ಭರಚುಕ್ಕಿ ಜಲಪಾತಕ್ಕೆ ಜೀವ ಕಳೆ ಬಂದಿದ್ದು. ಹಸಿರು ಕಾನನದ ನಡುವೆ ಹಾಲ್ನೊರೆಯಂತೆ ಭರಚುಕ್ಕಿ ಜಲಪಾತ ಧುಮಿಕ್ಕುತ್ತಿದೆ. […]