ಮಹತ್ವದ ನಿರ್ಣಯ, ಪಶ್ಚಿಮಘಟ್ಟದಲ್ಲಿ ಭೂಪರಿವರ್ತನೆಗೆ ತಾತ್ಕಾಲಿಕ ತಡೆ: ಖಂಡ್ರೆ

ಕಸ್ತೂರಿ ರಂಗನ್ ವರದಿ ಕುರಿತಂತೆ ಸಚಿವ ಸಂಪುಟದಲ್ಲಿ ಚರ್ಚೆ- ಅರಣ್ಯ ಸಚಿವರು ಹಲವು ನದಿಗಳ ಮೂಲ ಮತ್ತು ಜೀವ ವೈವಿಧ್ಯತೆಯ ತಾಣವಾದ ಪಶ್ಚಿಮ ಘಟ್ಟ ಸಂರಕ್ಷಿಸುವ ನಿಟ್ಟಿನಲ್ಲಿ, ಈ ವ್ಯಾಪ್ತಿಯ ಭೂ ಉಪಯೋಗ ಕುರಿತು ಹೊಸ ನಿಯಮಾವಳಿ ರೂಪಿಸುವವರೆಗೆ ಎಲ್ಲ ಭೂ ಪರಿವರ್ತನೆ ಪ್ರಸ್ತಾವನೆಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಕಳುಹಿಸಿರುವ ಟಿಪ್ಪಣಿಯಲ್ಲಿ ಅವರು, ಇತ್ತೀಚೆಗೆ ಕೇಂದ್ರ ಸರ್ಕಾರ ಮತ್ತೊಮ್ಮೆ […]
ತಾಯಿಗಾಗಿ ರೋಧಿಸಿ ನಿತ್ರಾಣಗೊಂಡ ಆನೆ ಮರಿ ಮೃತ:

ಕೊಡಗು: ದುಬಾರೆ ಸಾಕಾನೆ ಶಿಬಿರದಲ್ಲಿ ಆಶ್ರಯ ಪಡೆದಿದ್ದ ನಾಲ್ಕು ತಿಂಗಳ ಮರಿಯಾನೆ ದಿಢೀರನೆ ಮೃತಪಟ್ಟಿದೆ. ತಾಯಿಯಿಂದ ಬೇರ್ಪಟ್ಟು ಐದು ತಿಂಗಳ ಕಾಲ ರೋಧಿಸಿತ್ತು. ವಿರಾಜಪೇಟೆ ತಾಲೂಕಿನ ಮಲ್ದಾರೆ ಗ್ರಾಮದ ಎಸ್ಟೇಟ್‌ಗೆ ಕಾಡಾನೆಗಳ ಗುಂಪೊಂದು ದಾಳಿ ಇಟ್ಟಿತ್ತು, ಕೆಲ ಗಂಟೆಗಳ ನಂತರ ಗುಂಪು ಮಾಯವಾಗಿ ಮರಿಯಾನೆ ಮಾತ್ರ ತೋಟದ ಕಾರ್ಮಿಕರಿಗೆ ಕಂಡಿತ್ತು. ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇಲೆ ಗುಂಪಿಗಾಗಿ ಸಾಕಷ್ಟು ಹುಡಕಾಟ ನಡೆಸಲಾಗಿತ್ತು. ಆದರೆ ಫಲಿಸಲಿಲ್ಲ. ಸರಿಯಾಗಿ ನಡೆದಾಡಲೂ ಆಗದ ಮರಿ ಆನೆಯನ್ನ ಕಂಡು ಜನರು ಸಹ […]