ಸಾಗರ ವಿಭಾಗದಲ್ಲಿ ಕಾಡುಕೋಣಗಳ ನಿರಂತರ ಹತ್ಯೆ.!

ಪಶ್ಚಿಮಘಟ್ಟ ಸಾಲಿನಲ್ಲಿ ಕಂಡು ಬರುವ ವಿಶಿಷ್ಟ ಪ್ರಾಣಿ ಪ್ರಬೇಧ ಕಾಡೆಮ್ಮೆ/ ಕಾಡುಕೋಣಗಳು ನಿರುಪದ್ರವಿಗಳು. ಜನ ನಿಬಿಡ ಸ್ಥಳದಲ್ಲೂ ನಿರ್ಭಯವಾಗಿ ಓಡಾಡುವ ಈ ಪ್ರಬೇಧ ಮಾಂಸದ ದಾಹಕ್ಕೆ ಕ್ಷೀಣಿಸುತ್ತಿದೆ. ಮಲೆನಾಡಿನ ಕೆಲ ಸಮುದಾಯಗಳು ಸುಧಾರಿತ ಬಂದೂಕಿನಲ್ಲಿ ಅವ್ಯಾಹತವಾಗಿ ಬೇಟೆಯಾಡುತ್ತಿವೆ. ಶಿವಮೊಗ್ಗ ಜಿಲ್ಲೆ ಸಾಗರ ಅರಣ್ಯ ವಿಭಾಗದಲ್ಲಿ ಒಂದು ವರ್ಷದಲ್ಲಿ ಹತ್ತಾರು ಕಾಡೆಮ್ಮೆ-ಕಾಡುಕೋಣಗಳು ಹೀಗೇ ಬಲಿಯಾಗಿವೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಹುಂಚ ಹೋಬಳಿ ನಾಗರಹಳ್ಳಿ ಗ್ರಾಮದಲ್ಲಿ ಕಾಡುಕೋಣಗಳ ಮೂಳೆಗಳು ದೊರತಿದ್ದು ಆತಂಕಕ್ಕೀಡು ಮಾಡಿದೆ. ಈ ಭಾಗದಲ್ಲಿ ಗುಂಪಾಗಿ ಓಡಾಡುತ್ತಿದ್ದ […]