ಶಿವಮೊಗ್ಗ ನಗರಕ್ಕೆ ಬಂದ ಕರಡಿ, ವಾಕ್ ಮಾಡ್ತಿದ್ದವನ ಮೈ ಪರಚಿದೆ.

ಶಿವಮೊಗ್ಗ: ಇಂದು ಮುಂಜಾನೆ ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆ ಜನರಿಗೆ ಕರಡಿಯೊಂದು ಶಾಕ್ ನೀಡಿದೆ. ಶೆಟ್ಟಿಹಳ್ಳಿಯಿಂದ ದಿಕ್ಕು ತಪ್ಪಿ ಬಂದ ಕರಡಿ, ಎಫ್ ಬ್ಲಾಕ್ ನಲ್ಲಿ ಸಂಚರಿಸಿ ಭಯ ಮೂಡಿಸಿತು. ವಾಕ್ ಮಾಡಲು ತೆರಳಿದ್ದ ಇಲ್ಲಿನ ನಿವಾಸಿ ತುಕಾರಂ ಶೆಟ್ಟಿ ಮೇಲೆ ಎಗರಿ ಪರಚಿ ಓಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಶೆಟ್ಟಿ, ಹೊಟ್ಟೆ ಮೇಲೆ ಸಣ್ಣ ತರಚು ಗಾಯಗಳಾಗಿವೆ ಅಷ್ಟೇ ಆದರೆ ಕರಡಿ ಕಂಡು ಗಾಬರಿಯಾದೆ ಎಂದರು. ಕಾರ್ಯಾಚರಣೆ: ಕರಡಿ ಬಂದ ಮಾಹಿತಿ, ಸ್ಥಳೀಯರಿಂದ ಅರಣ್ಯ […]