ಮರಿಗಳನ್ನ ಅರಸಿ ಬಂದ ಚಿರತೆ ಸೆರೆ

ಮೈಸೂರು: ಕಬ್ಬು ಕಟಾವು ಮಾಡುವ ವೇಳೆ ಪತ್ತೆಯಾಗಿದ್ದ 3 ಚಿರತೆ ಮರಿಗಳನ್ನು ಬೋನಿನಲ್ಲಿಟ್ಟು ತಾಯಿ ಚಿರತೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಯಶಸ್ವಿಗೊಳಿಸಿದ ಅರಣ್ಯ ಇಲಾಖೆ ಸಿಬ್ಬಂದಿ. ಮೈಸೂರು ತಾಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮದ ಬಸವಣ್ಣ ಎಂಬುವರ ಜಮೀನಿನಲ್ಲಿ ಕಬ್ಬು ಕಟಾವು ಮಾಡುವ ವೇಳೆ 3 ಚಿರತೆ ಮರಿಗಳು ಪತ್ತೆಯಾಗಿದ್ದವು. ಇಲಾಖೆ ಸಿಬ್ಬಂದಿ ಕೂಡಲೇ ಈ ವಿಷಯವನ್ನ ಅರಣ್ಯ ಇಲಾಖೆ ಗಮನಕ್ಕೆ ತಂದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮೂರು ಮರಿಗಳನ್ನು ಬೋನಿನಲ್ಲಿರಿಸಿ ತಾಯಿ ಚಿರತೆ ಸೆರೆಗೆ ಕಾರ್ಯಾಚರಣೆ […]