ಶರಾವತಿ ಕಣಿವೆ ಜನರ ಅರಣ್ಯರೋಧನ: ಮೂಲಸೌಕರ್ಯಗಳಿಲ್ಲದೇ ಆರು ದಶಕ ಕಳೆದ ಜನ:

ನಾಡಿಗೆ ವಿದ್ಯುತ್ ನೀಡಲು ಮುಳುಗಡೆಯಾದವರು ಶಿವಮೊಗ್ಗ ಜಿಲ್ಲೆಯ ನಾನಾ ಭಾಗದಲ್ಲಿ ದಯಾನೀಯ ಸ್ಥಿತಿಯಲ್ಲಿದ್ದಾರೆ. ಮನೆಯಿಲ್ಲ, ಹಕ್ಕುಪತ್ರಗಳಿಲ್ಲ, ಶಿಕ್ಷಣ-ಆರೋಗ್ಯ, ಸರ್ಕಾರಿ ಸವಲತ್ತುಗಳಿಂದ ವಂಚಿತರಾಗಿ ಬದುಕುತ್ತಿದ್ದಾರೆ. ಆದರೆ ವಿದ್ಯುತ್ ಕೂಡ ಇಲ್ಲ ಎಂದರೆ ಎಂಥಹ ವಿಪರ್ಯಾಸ..! ಮುಳುಗಡೆ ಜನರನ್ನ ಆರು ದಶಕಗಳ ಹಿಂದೆ ದುರ್ಗಮ ಕಾಡಿನಲ್ಲಿ ಬಿಟ್ಟು ಬಂದ ಸರ್ಕಾರ ಈ ತನಕ ತಿರುಗಿ ನೋಡಿದ್ದೇ ಇಲ್ಲ. ಅವರೆಲ್ಲಾ ಈಗಲೂ ಸಂಕಷ್ಟದಲ್ಲಿ ದಿನದೂಡುತ್ತಿದ್ದಾರೆ. ಅಂತಹದೊಂದು ಬದುಕಿನ ಚಿತ್ರಣ ಇಲ್ಲಿದೆ. ಸಾಗರ ತಾಲೂಕಿನ ಭಾನುಕುಳಿ ಗ್ರಾಮ ಪಂಚಾಯತಿ. ಸಾಲಕೋಡ್ಲು, ಚೀಕನಹಳ್ಳಿ ಹಾಗೂ […]