ಭದ್ರಾ ಹಿನ್ನೀರು ಗಣನೀಯವಾಗಿ ಇಳಿಕೆ, ಆನೆಗಳ ಓಡಾಟ ತಡೆಗೆ ಐಬೆಕ್ಸ್ .!

ಈ ವರ್ಷ ಚಿಕ್ಕಮಗಳೂರಲ್ಲಿ ಆನೆ ಕಾಟ ನಿವಾರಣೆ ಕಷ್ಟ ಎನಿಸುತ್ತಿದೆ. ಬೇಲೂರು ಕಡೆಯಿಂದ ಲಗ್ಗೆ ಇಟ್ಟಿರೋ ಬೀಟಮ್ಮ ದಂಡಿಗೆ ನೆಲೆ ಕಲ್ಪಿಸಲು ಅರಣ್ಯ ಇಲಾಖೆ ಹರಸಾಹಸಪಡುತ್ತಿದ್ದಾರೆ. ಇನ್ನೊಂದೆಡೆ ಭದ್ರಾ ನದಿ ಹಿನ್ನೀರು ಇಳಿಕೆ ಹಿನ್ನೆಲೆ ಆನೆಗಳ ಓಡಾಟ ಸರಾಗವಾಗಿದೆ. ಈ ಭಾಗದ ಜನರು ಸ್ವಯಂಪ್ರೇರಿತ ಬೇಲಿ ಮಾಡಿಕೊಳ್ಳುತ್ತಿದ್ದಾರೆ. ಎನ್.ಆರ್.ಪುರದ ಭಾಗದಲ್ಲಿ ಭದ್ರಾ ಹಿನ್ನೀರು ದಾಟಿ, ಕಾಡಂಚಿನ ತೋಟಗಳಲ್ಲಿ ಸುಮಾರು ಹದಿನೇಳು ಆನೆಗಳು ಬೀಡು ಬಿಟ್ಟಿವೆ. ಕಳೆದೊಂದು ತಿಂಗಳಿಂದ ಆನೆ ಹಾವಾಳಿಗೆ ಹೈರಾಣಾಗಿರುವ ಹಳುವಳ್ಳಿ ಜನರು ಬೆಳೆ, ಮನೆ […]
ಅಂಬಾರಿ ಅರ್ಜುನನ ದುರಂತ ಅಂತ್ಯ: 15 ದಿನಗಳಲ್ಲಿ ವರದಿ ಕೈ ಸೇರುತ್ತೆ: ಈಶ್ವರ ಖಂಡ್ರೆ

8 ಬಾರಿ ಅಂಬಾರಿ ಹೊತ್ತ ಅರ್ಜುನ ಸಮಾಧಿಗೆ ಈಶ್ವರ ಖಂಡ್ರೆ ಪುಷ್ಪ ನಮನ. ನಿವೃತ್ತ ಮುಖ್ಯ ಅರಣ್ಯ ಪರಿಪಾಲಕರ ನೇತೃತ್ವದ ಸಮಿತಿಯಿಂದ ಸಾವಿನ ತನಿಖೆ. ಯಸಳೂರು ಮತ್ತು ಬಳ್ಳೆಯಲ್ಲಿ ಅರ್ಜುನನ ಸ್ಮಾರಕ ನಿರ್ಮಾಣ. ಹಾಸನ: ಯಸಳೂರು ಅರಣ್ಯ ವಲಯದಲ್ಲಿ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿ ಮಾಡಿದರೂ, ಅರಣ್ಯ ಸಿಬ್ಬಂದಿಯನ್ನು ರಕ್ಷಿಸಲು ಏಕಾಂಗಿಯಾಗಿ ಹೋರಾಡಿ ಹುತಾತ್ಮನಾದ ಕ್ಯಾಪ್ಟನ್ ಅರ್ಜುನನ ಸಾವಿನ ಕುರಿತಂತೆ ಕೆಲವರು ಅನುಮಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ನಿವೃತ್ತ ಮುಖ್ಯ ಅರಣ್ಯ ಪರಿಪಾಲಕರ ನೇತೃತ್ವದ ಉನ್ನತ ತನಿಖಾ ಸಮಿತಿ […]