ಅರ್ಜುನ ಆನೆ ಸಮಾಧಿ ಬೇಲಿ ಕಿತ್ತ ಕಾಡಾನೆಗಳು:

ಕಾಡಾನೆ ದಾಳಿಗೆ ಮೃತನಾದ ಅಂಬಾರಿಅರ್ಜುನನ ಸಮಾಧಿ ಬಳಿ ಕಾಡಾನೆಗಳು ದಾಂಧಲೆ ನಡೆಸಿರುವುದು ವರದಿಯಾಗಿದೆ. ಅರ್ಜುನನ ಸಮಾಧಿ ಸುತ್ತ ಹಾಕಿದ್ದ ತಂತಿಬೇಲಿಯನ್ನು ಮುರಿದಿರುವ ಗಜಪಡೆ ಸಮಾಧಿ ಬಳಿಯೆಲ್ಲಾ ಓಡಾಡಿವೆ. ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿ ದಬ್ಬಳ್ಳಿಕಟ್ಟೆ ಅರಣ್ಯ ಪ್ರದೇಶದಲ್ಲಿ ಮೃತನಾದ ಸ್ಥಳದಲ್ಲೇ ಅರ್ಜುನನ ಸಮಾಧಿ ಮಾಡಲಾಗಿದೆ. ತಾತ್ಕಾಲಿಕವಾಗಿ ಸಮಾಧಿ ಸುತ್ತ ಅರಣ್ಯ ಇಲಾಖೆ ಬೇಲಿ ಹಾಕಿತ್ತು. ಗುರುವಾರ ರಾತ್ರಿ ಈ ಸ್ಥಳಕ್ಕೆ ಆಗಮಿಸಿರುವ ಹಿಂಡು ಬೇಲಿ ನೆಲಸಮಗೊಳಿಸಿವೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅರ್ಜುನ […]