Rain Land

Ode to the west wind

Join Us on WhatsApp

Connect Here

ಟಾಸ್ಕ್ ಫೋರ್ಸ್ ಲ್ಲಿ ಗಣಿಗಾರಿಕೆಗೆ ನಿಯಮ ಬಾಹಿರ ಅನುಮತಿ, ಅಧಿಕಾರಿಗಳ ವಿಚಾರಣೆಗೆ ಖಂಡ್ರೆ ಸೂಚನೆ

WhatsApp
Facebook
Twitter
LinkedIn

ಹಾಸನ: ನಿಯಮಗಳನ್ನ ಗಾಳಿಗೆ ತೂರಿ, ಟಾಸ್ಕ್ ಫೋರ್ಸ್ ಸಭೆಯಲ್ಲಿ ಕಾನೂನುಬಾಹಿರವಾಗಿ ಗಣಿಗಾರಿಕೆಗೆ ಅನುಮತಿ ‌ನೀಡಲು ಅನುವಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದಾರೆ.

ಖಂಡ್ರೆ ಕಚೇರಿ ಹೊರಡಿಸಿದ ಟಿಪ್ಪಣಿ ಹೀಗಿದೆ..

ಹಾಸನ ಜಿಲ್ಲೆಯ ಡೀಮ್ಸ್ ಅರಣ್ಯದಲ್ಲಿ ಸ್ಥಗಿತಗೊಳಿಸಲಾಗಿದ್ದ ಕಲ್ಲು ಗಣಿಗಾರಿಕೆ ಮತ್ತೆ ಮುಂದುವರಿದಿದ್ದರೂ ದಿ. 19.08.2024ರ ಟಿಪ್ಪಣಿ ಸಂಖ್ಯೆ ಅ.ಜೀಪ757/2024-25ನಲ್ಲಿ ಕ್ರಮಕ್ಕೆ ಸ್ಪಷ್ಟ ಸೂಚನೆ ನೀಡಿದ್ದರೂ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸುವಲ್ಲಿ ವಿಫಲವಾಗಿರುವ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

ಅರಕಲಗೂಡು ಮತ್ತು ಚನ್ನರಾಯಪಟ್ಟಣ ತಾಲೂಕಿನ ಡೀಮ್ಡ್ ಅರಣ್ಯದಲ್ಲಿ ಎಫ್.ಸಿ. ಅನುಮತಿ ಇಲ್ಲದೆ ಕಲ್ಲು ಗಣಿಗಾರಿಕೆ ನಡೆಸಲು ಜಿಲ್ಲಾ ಟಾಸ್ಕ್ ಫೋರ್ಸ್ ನಲ್ಲಿ ಅನುಮತಿ ನೀಡಿರುವುದು ಸಂಪೂರ್ಣ ಕಾನೂನಿನ ಬಾಹಿರವಾಗಿರುತ್ತದೆ ಮತ್ತು ರಾಜ್ಯ ಘನ ಹೈಕೋರ್ಟ್ ನೀಡಿರುವ ತೀರ್ಪಿನ ಉಲ್ಲಂಘನೆಯೂ ಆಗಿರುತ್ತದೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದರೂ ತತ್ ಕ್ಷಣ ಕ್ರಮ ವಹಿಸದೆ ನಿರ್ಲಕ್ಷ್ಯ ತೋರಿರುವ ಮತ್ತು ಪುನಾರಂಭವಾಗಿರುವ ಕಲ್ಲು ಗಣಿಗಾರಿಕೆ ಸ್ಥಗಿತಕ್ಕೆ ಕ್ರಮ ವಹಿಸದ ಸಿಸಿಎಫ್, ಡಿಸಿ.ಎಫ್. ಸೇರಿದಂತೆ ಈ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿರುವ ಎಲ್ಲ ಅರಣ್ಯ ಅಧಿಕಾರಿಗಳು ಮತ್ತು ಟಾಸ್ಕ್ ಫೋರ್ಸ್ ಸಭೆಯಲ್ಲಿ ಅನುಮೋದಿಸಿದ ಕಂದಾಯ, ಗಣಿ ಇಲಾಖೆ ಅಧಿಕಾರಿಗಳ ವಿರುದ್ಧ ಅರಣ್ಯ 3B ಸಂರಕ್ಷಣಾ ಕಾಯಿದೆ 1980ರ ಸೆಕ್ಷನ್ ರೂಲ್ 9ರ ಅಡಿಯಲ್ಲಿ ಅನುಮತಿ ಪಡೆದು ಮೊಕದ್ದಮೆ ದಾಖಲಿಸಲು ಕ್ರಮವಹಿಸುವಂತೆ ಹಾಗೂ ಅರಣ್ಯ ಪ್ರದೇಶದಲ್ಲಿ ಆಗಿರುವ ಪರಿಸರ ಹಾನಿಯ ಪ್ರಮಾಣ ಕುರಿತಂತೆ ಸ್ಥಳ ಸಮೀಕ್ಷೆ ನಡೆಸಿ ಕೂಡಲೇ ವರದಿ ಸಲ್ಲಿಸಲು ಎಪಿಸಿಸಿಎಫ್ ದರ್ಜೆಯ ಅಧಿಕಾರಿಯನ್ನು ನಿಯೋಜಿಸಲು ಈ ಮೂಲಕ ಸೂಚಿಸಿದೆ.

The Note issued by Forest minister Eshwar B Khandre’s office.

“The illegal quarrying that was stopped in Deemed Forest in Hassan district has resumed, despite clear instructions in note number dated 19.08.2024. The negligence of forest officials in stopping the quarrying is being taken seriously. Quarrying without FC ( clearance) in deemed Forest in Arkalgud and Channarayapatna taluks is completely illegal and violates the High Court’s order. Even though it has been reported in the media, the officials’ negligence and inaction are noteworthy. The officials responsible for stopping the quarrying, including the CCF and DCF, have failed in their duty. The government has ordered a probe and a report on the environmental damage. The officials who granted permission for quarrying without FC permission will be prosecuted under Section 9 of the Forest Conservation Act, 1980. An officer of the rank of APCCF will conduct a field investigation and submit a report immediately.”

You Might Also Like This