ಮೈಸೂರು ಜಿಲ್ಲೆ, ಟಿ-ನರಸೀಪುರ ತಾಲ್ಲೂಕಿನಲ್ಲಿ ಒಂದೇ ತಿಂಗಳಿಗೆ ಇಬ್ಬರು ವಿದ್ಯಾರ್ಥಿಗಳು ಚಿರತೆಗಳಿಗೆ ಬಲಿಯಾಗಿದ್ದಾರೆ. ತಾಲ್ಲೂಕಿನಾದ್ಯಂತ ಚಿರತೆಗಳ ಹಾವಳಿ ಹೆಚ್ಚಾಗಿದ್ದು ಈ ಭಾಗದಲ್ಲಿ
ಸಕಾಲದಲ್ಲಿ ಕಬ್ಬು ಕಟಾವು ಮಾಡುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಹೊರಡಿಸಿದ ಆದೇಶದಲ್ಲೇನಿದೆ..?

ಟಿ ನರಸೀಪುರ ತಾಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು ಈ ವಲಯದ ವ್ಯಾಪ್ತಿಯ ಸೂಸಲು ಹೋಬಳಿ ಎಂಎಲ್ ಹುಂಡಿ ಗ್ರಾಮದ ವಾಸಿ, ಮಂಜುನಾಥ್ ಚನ್ನಮಲ್ಲದೇವರು ಎಂಬುವರು ಚಿರತೆ ದಾಳಿಯಿಂದ ಅಕ್ಟೋಬರ್ 31 ರಂದು ಮೃತಪಟ್ಟಿರುತ್ತಾರೆ.
ಸದರಿ ವ್ಯಾಪ್ತಿಯ ಎಸ್ ಕೆಂಪೇ ಹುಟ್ಟಿ ಗ್ರಾಮದಲ್ಲಿ ಒಂದನೇ ತಾರೀಕು ಚಿರತೆ ದಾಳಿಯಿಂದ ಕುಮಾರಿ ಮೇಘನಾ ಎಂಬ ಯುವತಿಯು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಈ ಸಂಬಂಧ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯು ನಿರಂತರವಾಗಿ ನಡೆಯುತ್ತಿದೆ. ಆದಾಗಿಯೂ ಈವರೆಗೆ ಚಿರತೆ ಸೆರೆಯಾಗಿರುವುದಿಲ್ಲ ಚಿರತೆ ಹಾವಳಿ ಕಂಡುಬಂದಿರುವ ಗ್ರಾಮಗಳಲ್ಲಿ ತಂಡಗಳನ್ನ ಕಳುಹಿಸಿ ಸ್ವೀಕೃತವಾಗುವ ದೂರಿನ ಜಾಗಗಳಾದ ಗದ್ದೆ ಹೊಲ ತೋಟ ಪಾಳು ಬಿದ್ದ ಜಾಡುಗಳು ಬೆಟ್ಟಗುಡ್ಡಗಳು ಹಾಗೂ ಅವುಗಳ ತಪ್ಪಲಿನ ಪ್ರದೇಶ ಮತ್ತು ಇನ್ನಿತರ ಎಲ್ಲಾ ಕಡೆಗಳಲ್ಲಿಯೂ ಸುಸಜ್ಜಿತ ವ್ಯವಸ್ಥೆ ವರದಿ ಪಡೆಯಲಾಗಿದೆ. ಸದರಿ ವರದಿಗಳಲ್ಲಿ ತಾಲೂಕಿನ ವ್ಯಾಪ್ತಿಗಳಾದ 195 ಗ್ರಾಮಗಳಲ್ಲಿ ಈ ಪೈಕಿ 40 ಗ್ರಾಮಗಳ ಕಬ್ಬಿನ ಬೆಳೆಯನ್ನು ಸಕಾಲದಲ್ಲಿ ಕಟಾವು ಮಾಡಿದ್ದಲ್ಲಿ ಚಿರತೆಯನ್ನು ಸರಿ ಹಿಡಿಯುವ ಕಾರ್ಯಕ್ಕೆ ಅನುವಾಗುವುದು. 40 ಗ್ರಾಮಗಳ ರೈತರ ಜಮೀನಿನಲ್ಲಿ ಬೆಳೆದಿರುವ ಕಬ್ಬಿನ ಬೆಳೆಯನ್ನು ಕಟಾವು ಮಾಡಿ ಸಾಗಾಣಿಕೆ ಮಾಡಲು ಕ್ರಮವಹಿಸುವಂತೆ ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಉಪ ಅರಣ್ಯ ಸಂರಕ್ಷಾಧಿಕಾರಿಗಳು ಮೈಸೂರು ಉಲ್ಲೇಖದಂತೆ ಕೋರಿರುತ್ತಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮೈಸೂರು ವಿಭಾಗ ಮೈಸೂರು ರವರ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. ಟಿ ನರಸೀಪುರ ತಾಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿರುವ ಸಂಬಂಧ ಸಾರ್ವಜನಿಕರ ಪ್ರಾಣ ಹಾನಿ ತಡೆಯಲು ಹಾಗೂ ಸಾರ್ವಜನಿಕರಲ್ಲಿ ಚಿರತೆ ದಾಳಿ ಬಗ್ಗೆ ಭಯ ಹೋಗಲಾಡಿಸಲು ಕ್ರಮ ಬೇಕಾಗಿದೆ. ಟಿ ನರಸೀಪುರ ತಾಲೂಕು ವ್ಯಾಪ್ತಿಯ 23 ಗ್ರಾಮ ಪಂಚಾಯಿತಿಗಳಿಗೆ ಒಳಪಡುವ 40 ಗ್ರಾಮಗಳಲ್ಲಿ ರೈತರು ಬೆಳೆದಿರುವ ಪಕ್ವಗೊಂಡಿರುವ ಕಬ್ಬನ್ನ ಮೊದಲ ಆದ್ಯತೆಯ ಮೇಲೆ ಜೋರಾಗಿ ಕಟಾವು ಮಾಡುವಂತೆ ಮನ ಗಂಡು ಈ ಕೆಳಗಂಡಂತೆ ಆದೇಶ ಹೊರಡಿಸಲಾಗಿದೆ. ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಟಿ ನರಸೀಪುರ ತಾಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರ ಹಾಗೂ ಜೀವಸಂಕುಲಗಳ ಪ್ರಾಣ ಹಾನಿ ತಡೆಯಲು ಹಾಗೂ ಸಾರ್ವಜನಿಕರಲ್ಲಿ ಚಿರತೆ ದಾಳಿ ಬಗ್ಗೆ ಭಯ ಹೋಗಲಾಡಿಸಲು 23 ಗ್ರಾಮ ಪಂಚಾಯಿತಿಗಳಿಗೆ ಒಳಪಡುವ ತುರುಕನೂರು, ಯಾಚನಹಳ್ಳಿ, ಮಾರಗೌಡನಹಳ್ಳಿ, ದಾಸೇಗೌಡನಹಳ್ಳಿ, ಸಿವಿ ಕೊಪ್ಪಲು, ಕೇತುಪುರ, ಉಕ್ಕಲಗೆರೆ, ಎಂಎಲ್ ಹುಂಡಿ, ಸೋಮನಾಥಪುರ , ಚಕ್ಲಿಪುರ, ದೊಡ್ಡೇಬಾಗಿಲು, ಹೊರಳಹಳ್ಳಿ, ಕರುಗಹಳ್ಳಿ, ಚದರವಳ್ಳಿ, ಎಸ್ ದೊಡ್ಡಾಪುರ, ಬೋಳೇ ಗೌಡನಹುಂಡಿ, ಕೆಂಪನಪುರ, ರಾಮೇಗೌಡನಪುರ, ನರ ಜಾತನಹಳ್ಳಿ, ಚೀಟಿಗಯ್ಯನ ಕೊಪ್ಪಲು, ನಾಗಲ ಕೆರೆ, ಮುಸುವಿನ ಕೊಪ್ಪಲು, ಸೂಸಲೆ, ಬೆನಕನಹಳ್ಳಿ ವೀರಪಡೆಯರ ಗುಂಡಿ, ಕಾಳ ಬಸವನಗುಂಡಿ, ಕುರುಬಾಳ ಹುಂಡಿ, ಗಾಡಿ ಜೋಗಿ ಹುಂಡಿ, ಮಾದಿಗಹಳ್ಳಿ , ಸುಜಲು, ಗುರು ಹಕನೂರು, ತುಂಬಲ, ಯರಗನಹಳ್ಳಿ, ಸಿ ಹಳ್ಳಿ, ಮಾದಾಪುರ, ಹಿರಿಯೂರು, ಮೂಗೂರು, ಕುಡ್ಲೂರು ಹೀಗೆ ಒಟ್ಟು 40 ಗ್ರಾಮಗಳಲ್ಲಿ ರೈತರು ಬೆಳೆದಿರುವ ಕಬ್ಬನ್ನ ಕಟಾವು ಮಾಡಲಾಗುತ್ತಿದೆ.
