Ode to the west wind

Join Us on WhatsApp

Connect Here

ಚಿರತೆಗಳು ನರಭಕ್ಷಕಗಳಾ..?

WhatsApp
Facebook
Twitter
LinkedIn

ಇಡೀ ರಾಜ್ಯಾದ್ಯಂತ ಚಿರತೆಗಳ ದಾಳಿಗೆ  ಹೈರಾಣಾಗಿದ್ದಾರೆ. ಶಿವಮೊಗ್ಗವು ಸಹ ಇದರಿಂದ ಹೊರತಾಗಿಲ್ಲ. ಪಶ್ಚಿಮ ಘಟ್ಟ ಸಾಲಿನ ಪ್ರಮುಖ ಜಿಲ್ಲೆಯಾಗಿರುವ ಶಿವಮೊಗ್ಗ ವಿಪರೀತ ಅರಣ್ಯ ನಾಶದಿಂದ ಪ್ರಾಣಿ ಸಂಕುಲಕ್ಕೆ ಕಂಟಕ ಪ್ರಾಯ ವಾತಾವರಣ ಸೃಷ್ಟಿಸಿದೆ. ಆರು ತಿಂಗಳಿನಲ್ಲಿ ನಾಲ್ಕು ಚಿರತೆಗಳು ಸಾವನ್ನಪ್ಪಿವೆ. ಬಹುತೇಕ ಚಿರತೆಗಳು ಜನರು ಹಾಕಿದ ಉರುಳಿಗೆ ಬಲಿಯಾಗಿವೆ. ಮಂಡಗದ್ದೆ, ಚೋರಡಿ, ಕೊಮ್ಮನಾಳು, ಭದ್ರಾವತಿ ಭಾಗದಲ್ಲಿ ಚಿರತೆ ಉಪಟಳ ಹೆಚ್ಚಾಗಿವೆ.

ಶಿವಮೊಗ್ಗದಲ್ಲೂ ಚಿರತೆ ಸಂತತಿ ಹೆಚ್ಚಾಗಿದೆಯಾ..? ಕಾಡು ಸಂಕುಚಿತ ಆಗಿದೆಯಾ..? ಚಿರತೆ ನರಭಕ್ಷಕ ಪ್ರಾಣಿಯೇ..? ಜನರು ಚಿರತೆಗಳಿಗೆ ಹೆದರಿಕೊಳ್ಳಬೇಕಾ..? ಎಂಬ ಪ್ರಶ್ನೆಗಳಿಗೆ ಶಿವಮೊಗ್ಗ ಹೊರವಲಯದ ತ್ಯಾವರೆಕೊಪ್ಪದಲ್ಲಿರುವ ಮೃಗಾಲಯದ ವೈದ್ಯ ಮುರಳಿ ಮನೋಹರ್ ಬೇಸರ ವ್ಯಕ್ತಪಡಿಸುತ್ತಾರೆ.

ವಾರದ ಹಿಂದೆ ಚೋರಡಿ ಅರಣ್ಯ ವಲಯ ಕೋಣೆ ಹೊಸೂರು ಗ್ರಾಮದಲ್ಲಿ ಚಿರತೆ ಉರುಳಿಗೆ ಬಿದ್ದಿತ್ತು. ಎಲ್ಲೋ ತಗುಲಿಕೊಂಡ ಚಿರತೆ ಮರದ ಮೇಲೆ ನೇಣು ಹಾಕಿಕೊಂಡಂತೆ ಸಾವನ್ನಪ್ಪಿತ್ತು. ಇದರ ರಕ್ಷಣೆಗೆ ಧಾವಿಸುವ ಮುನ್ನವೇ ಅದು ಅಸುನೀಗಿತ್ತು.  ಇದರ ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯ ಮುರುಳಿ ಹೀಗೆ ಹೇಳ್ತಾರೆ.

ಚಿರತೆಗಳು ಒಂದೇ ಇರೋದಕ್ಕೆ ಇಷ್ಟಪಡುತ್ತವೆ. ಹುಲಿಗಳಂತೆ ಸರಹದ್ದನ್ನು ನಿರ್ಮಾಣ ಮಾಡ್ಕೊಂಡಿರುತ್ತದೆ.‌ ಇದರ ಸರಹದ್ದು ಸರಿ ಸುಮಾರು 48 ಚದರ  ಕಿಲೋಮೀಟರ್ ಗಳಾಗಿರುತ್ತವೆ. ಇತ್ತೀಚಿಗೆ ಚಿರತೆಗಳ ಸಂತತಿ ಕೂಡ ಹೆಚ್ಚಿದೆ. ಇವು ಜನನಿ ಬಿಡ ಪ್ರದೇಶಗಳಿಗೆ ಬರಲು ಸಾಕಷ್ಟು ಕಾರಣಗಳಿವೆ. ಮೊದಲನೆಯದಾಗಿ, ಅವುಗಳಿಗೆ ಆಹಾರ ಸಿಗುತ್ತಿಲ್ಲ. ಊರುಗಳಿಗೆ ಧಾವಿಸಿದರೆ ಬಹಳ ಮುಖ್ಯವಾಗಿ ನಾಯಿಗಳು ಚಿರತೆಗಳಿಗೆ ಸುಲಭವಾಗಿ ಸಿಗುತ್ತವೆ. ಕುರಿ ಗಳನ್ನು ಕೂಡ ಸುಲಭವಾಗಿ ಹಿಡಿಯಬಹುದು. ಚಿರತೆಗಳ ಬಹಳ ಮುಖ್ಯ ಗುಣ ಎಂದರೆ ತಮಗಿಂತ ಅಸಮರ್ಥ ಅನಿಸುವ ಪ್ರಾಣಿಗಳ ಮೇಲೆ ಮಾತ್ರ ದಾಳಿ ಮಾಡುತ್ತವೆ. ಮಕ್ಕಳ ಮೇಲೂ ದಾಳಿ ಮಾಡಿರುವ ಉದಾಹರಣೆಗಳಿವೆ. ತಮಗಿಂತಾ ಬಲಶಾಲಿ ಎನಿಸಿದರೆ ದಾಳಿ ಮಾಡುವುದಿಲ್ಲ. ವ್ಯಕ್ತಿಗಳನ್ನು ಹಿಡಿದು ತಿಂದಿರೋ ನಿದರ್ಶನಗಳಿಲ್ಲ. ಅಕ್ಟೋಬರ್ ನಿಂದ ಮಾರ್ಚ್ ಅವರಿಗೆ ಅವು ಹೀಟ್ ಗೆ (ಬೆದೆ) ಬಂದಿರುತ್ತವೆ.

ಈ ಸಮಯದಲ್ಲಿ ತನ್ನ ಸರಹದ್ದಿನಲ್ಲಿ ಸಂಗಾತಿ ಸಿಗದೇ ಹೋದಾಗ ಅರಸಿಕೊಂಡು ಊರುಗಳತ್ತ ಧಾವಿಸುವುದು ಸಾಮಾನ್ಯ. ಹೀಗೆ ಬರುವಾಗ ಜನನಿಬಿಡ ಪ್ರದೇಶ ಗಳಿಗೆ ಮನುಷ್ಯನನ್ನ ನೇರವಾಗಿ ಅಟ್ಯಾಕ್ ಮಾಡುವ ಧೈರ್ಯವಿಲ್ಲ.‌ ಅವು ನರಭಕ್ಷಕ ಅಲ್ಲ‌.  ಸಾಮಾನ್ಯವಾಗಿ ಹೊಲದಲ್ಲಿ ಕಳೆ ತೆಗೆಯುತ್ತಿರುವಾಗ ಮನುಷ್ಯರ ಮೇಲೆ ಅದರಲ್ಲೂ ಮಹಿಳೆಯರ ಮೇಲೆ ಅಟ್ಯಾಕ್ ಮಾಡಿರುವ ಉದಾಹರಣೆ ಇವೆ.  ಅರಣ್ಯ ನಾಶದ ಸಮಸ್ಯೆಗಳ ಮಧ್ಯೆ ಏರುತ್ತಿರುವ ಚಿರತೆ ಸಂತತಿ ಹೊಸ ಸರಹದ್ದನ್ನು ನಿರ್ಮಾಣ ಮಾಡಿಕೊಳ್ಳುವ ಅನಿವಾರ್ಯ ಈ ಬಿಕ್ಕಟ್ಟು ಸೃಷ್ಟಿಸಿದೆ. ಅರಣ್ಯ ಇಲಾಖೆಗೆ ಮಾಹಿತಿ ಸಿಕ್ಕ ತಕ್ಷಣ ಅವುಗಳನ್ನು ಸೆರೆ ಹಿಡಿಯಲು ಸಾಧ್ಯವಿಲ್ಲ. ಅದರ ಚಲನ-ವಲನಗಳ ಮೇಲೆ ನಿಗಾ ಇಡಬೇಕು. ಎಲ್ಲಿ ಹೆಚ್ಚು ಗುರುತುಗಳು ಪದೇ ಪದೇ ಮೂಡಿರುತ್ತವೋ ಆ ಪ್ರದೇಶಗಳನ್ನು ಗುರುತಿಸಿಕೊಳ್ಳಬೇಕು. ಅಲ್ಲಿ ಕೇಜ್ ಗಳನ್ನು ಇಡಬೇಕು. ವೈದ್ಯರ ತಂಡದ ನೆರವಿನಿಂದ ಅರಿವಳಿಕೆ  ಚುಚ್ಚುಮದ್ದು ನೀಡಿ ಅದರ ಆರೋಗ್ಯದ ಅನುಗುಣವಾಗಿ ಬೇರೆ ಕಡೆ ಸ್ಥಳಾಂತರ ಅಥವಾ ಮೃಗಾಲಯಗಳಿಗೆ ನೀಡಲಾಗುತ್ತೆ. ಚಿರತೆ ಓಡಾಡಿದ್ದಲ್ಲೆಲ್ಲ ಭಯಪಡುವುದು ಅನವಶ್ಯ. ಒಂದು ವೇಳೆ ಕಾಣಿಸಿಕೊಂಡರೆ ಮಕ್ಕಳನ್ನು ಹೊರ ಬಿಡಬಾರದು. ಸಾಕು ಪ್ರಾಣಿಗಳನ್ನು ಮನೆ ಒಳಗೆ ಕಟ್ಟಿಸಿಕೊಳ್ಳಬೇಕು.

ಚಿರತೆ ಇನ್ನೇನು ಕೆಲ ವರ್ಷಗಳಲ್ಲಿ ಅಪಾಯದ ಅಂಚಿನ ಪ್ರಭೇದಕ್ಕೆ ವಿಶ್ವಸಂಸ್ಥೆಯ IUCN ಸೇರಿಸುತ್ತೆ.  ಚಿರತೆಗಳ ಗಣತಿ ಅರಣ್ಯ ಇಲಾಖೆ ಮಾಡುವುದಿಲ್ಲ. ಶಿವಮೊಗ್ಗದಲ್ಲಿ ಕಳೆದ ಆರು ತಿಂಗಳಿನಿಂದ ಸಾಕಷ್ಟು ಚಿರತೆಗಳು ಮೃತಪಟ್ಟಿವೆ. ಅದರಲ್ಲಿ ಬಹಳ ಮುಖ್ಯವಾಗಿ ಕಾಡುಪ್ರಾಣಿಗಳ ಬೇಟೆಯಾಡಲು ಬಳಸುವ ಉರುಳು ಎಂದು ವನ್ಯಜೀವಿ ವೈದ್ಯ ಮುರಳಿ ಹೇಳಿದರು..

watch this video and subscribe to Rainland YTC

You Might Also Like This