Ode to the west wind

Join Us on WhatsApp

Connect Here

ಆರು ದಶಕ ನೀರಲ್ಲಿದ್ದರೂ ನಶಿಸದ ಮಡೆನೂರು ಹಿರೇಭಾಸ್ಕರ ಅಣೆಕಟ್ಟು..!

WhatsApp
Facebook
Twitter
LinkedIn

ಬ್ರಿಟೀಷ್‌ ಇಂಡಿಯಾ ಸಮಯದಲ್ಲಿ ಜಲಾಶಯ, ಅಣೆಕಟ್ಟು, ಒಡ್ಡುಗಳನ್ನ ಹೇಗೆ ನಿರ್ಮಾಣ ಮಾಡುತ್ತಿದ್ದರು ಎಂಬ ಕೌತುಕ ಸಾಕಷ್ಟು ಜನರಲ್ಲಿರುತ್ತೆ. ಇಂದಿನಂತೆ ಕಾಂಕ್ರೀಟ್‌ ಬಳಸಿ ಕಟ್ಟುತ್ತಿರಲಿಲ್ಲ.  ಉದ್ಘಾಟನೆಗೆ ಮುನ್ನವೇ ಉದುರಿ ಬೀಳುತ್ತಲೂ ಇರಲಿಲ್ಲ. ಇಂತಹದೊಂದು ಅದ್ಭುತ ಅಣೆಕಟ್ಟೊಂದು ಆರು ದಶಕಗಳ ಕಾಲ ನೀರಿನಲ್ಲೇ ಮುಳುಗಿದೆ.  ಗಟ್ಟುಮುಟ್ಟಾಗಿಯೂ ಇದೆ ಎಂದರೆ ಎಂಥವರಿಗೂ ಅಚ್ಛರಿ ಎನಿಸದೇ ಇರದು.  ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶರಾವತಿ ನದಿಯಲ್ಲಿ ಎಂಟು ದಶಕದ ಅಣೆಕಟ್ಟಿದೆ, ಇದಕ್ಕೆ ಮಡೆನೂರು ಹಿರೇಭಾಸ್ಕರ ಎಂದು ಹೆಸರು.

ಶರಾವತಿ ವನ್ಯಜೀವಿ ಸಂರಕ್ಷಿತ ವಲಯದೊಳಗೆ ಸಿಗಂದೂರಿಗೆ ತೆರಳುವ ಹೊಳೆಬಾಗಿಲಿನಿಂದ ಸುಮಾರು ಹತ್ತು ಕಿಲೋಮೀಟರ್‌ ದೂರದ ಊರು ಈ  ಮಡೆನೂರು. ಊರಿಗೆ ಮೊದಲ ಸಂಪರ್ಕ ಸೇತುವಾಗಿ ಶರಾವತಿ ವಿದ್ಯುದಾಗಾರದ ಮೊದಲ ಅಣೆಕಟ್ಟಾಗಿ ಇಲ್ಲಿ ಹಿರೇಭಾಸ್ಕರ ಡ್ಯಾಂ ನಿರ್ಮಾಣ ಮಾಡಲಾಗಿತ್ತು. ಅಂದು ೧೯೩೯ರಲ್ಲಿ ನಾಲ್ವಾಡಿ ಕೃಷ್ಣರಾಜ ಒಡೆಯರ್‌ ಈ ಯೋಜನೆಗೆ ಜೋಗ್‌ನಲ್ಲಿ ಅಡಿಗಲ್ಲು ಹಾಕಿದ್ದರು.  ಸುಮಾರು ೧೧೪ ಅಡಿ ಉದ್ದ ಹಾಗೂ ೨೫ ಟಿಎಂಸಿ ಸಂಗ್ರಹ ಸಾಮರ್ಥ್ಯದ ಈ ಅಣೆಕಟ್ಟನ್ನ ಸುಬ್ಬಾರಾವ್‌ ಎಂಬ ಎಂಜಿನೀಯರ್‌ ನಿರ್ಮಾಣ ಮಾಡಿದರು. ಇದರ ಕಾಮಗಾರಿ ಮುಕ್ತಾಯವಾಗಿದ್ದು ೧೯೪೮ರಲ್ಲಿ.

ಅಂದು ಫ್ರಾನ್ಸ್‌ ಹಾಗೂ ನಾನಾ ದೇಶಗಳಲ್ಲಿ ಪ್ರಚಲಿತಲಿದ್ದ ಮಾದರಿಯನ್ನ ಇಲ್ಲಿ ಅಳವಡಿಸಿಕೊಂಡು ಸುಣ್ಣ ಹಾಗೂ ಇಟ್ಟಿಗೆ ಚೂರುಗಳ ಮಿಶ್ರಣ ಸುರ್ಕಿಯಲ್ಲಿ ಕಟ್ಟಲಾಗಿದೆ. ವಿಶೇಷವಾಗಿ ಗುಮ್ಮಟ್ಟದಂತೆ ಕಾಣುವ ಸೈಫನ್‌ಗಳನ್ನ ನಿರ್ಮಾಣ ಮಾಡಿ ಸ್ವಯಂಚಾಲಿತವಾಗಿ ನೀರನ್ನ ಹೊರಹಾಕುವ ವ್ಯಸವ್ಥೆ ಮಾಡಲಾಗಿದೆ. ನೀರು ಹೊರಹೋಗಲು ಆರು ಗೇಟ್‌ಗಳನ್ನ ಅಂದು ಮಾಡಿದ್ದರು.  ಈ ಅಣೆಕಟ್ಟಿನಿಂದ ಸುಮಾರು ೧೨೦ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿತ್ತು. ಮೈಸೂರು ರಾಜ್ಯ ಅಸ್ಥಿತ್ವಕ್ಕೆ ಬಂದ ಮೇಲೆ ವಿದ್ಯುತ್‌ ಅಭಾವ ಆರಂಭವಾಯ್ತು.  ಆಗ ೬೦ರ ದಶಕದಲ್ಲಿ ಶರಾವತಿಗೆ ಲಿಂಗನಮಕ್ಕಿ ಜಲಾಶಯ ನಿರ್ಮಾಣ ಮಾಡಿದರು. ಕೇವಲ ಹದಿನಾರು ವರ್ಷ ಸೇವೆ ಸಲ್ಲಿಸಿದ್ದ ಈ ಅಣೆಕಟ್ಟಿನ ಮೇಲೆ ೪೧ ಅಡಿ ನೀರು ನಿಲ್ಲತೊಡಗಿತು. ಅಲ್ಲಿಂದ ಈತನಕ ಗಣನೀಯ ಪ್ರಮಾಣದಲ್ಲಿ ಶರಾವತಿ ಒಡಲು ಬರಿದಾದಾಗ ಮಾತ್ರ ಈ ಅಣೆಕಟ್ಟಿನ ದರ್ಶನ ಸಿಗುತ್ತೆ.

ಪ್ರವಾಸಿಗರಿಗೆ ನಿಷೇಧವಿರುವ ಈ ಸ್ಥಳ ಅರಣ್ಯ ಇಲಾಖೆಯ ರಕ್ಷಣೆಯಲ್ಲಿದೆ. ಮಡೆನೂರಿನ ಹಿರೇಭಾಸ್ಕರ ಅಣೆಕಟ್ಟು ನಾನಾ ಕಾರಣದಿಂದ ನಶಿಸಿ ಹೋಗುವ ಆತಂಕ ಎದುರಾಗಿದೆ. ಹಿಂದೆ ಸಿಗಂದೂರು ಲಾಂಚ್‌ ದಾಟಿಸಲು ಕಟ್ಟೆ ಒಡೆದಿದ್ದರು. ಬಳಿಕ ನೀರು ಕಡಿಮೆಯಾಗುತ್ತಿದ್ದಂತೆ ಅಣೆಕಟ್ಟಿಗೆ ಹಾಕಿರುವ ಕಲ್ಲುಗಳನ್ನ ಈ ಭಾಗದ ಜನರು ಕದ್ದೊಯ್ಯತೊಡಗಿದರು. ಅಕ್ರಮವಾಗಿ ನುಸುಳುವ ಪ್ರವಾಸಿಗರು ಹಾಗೂ ಪುಂಡರಿಂದ ಮದ್ಯದ ಪೌಚ್‌, ಬಾಟೆಲ್‌ಗಳ ಡಸ್ಟ್ ಬಿನ್ ಆಯ್ತು. ಈಗಲಾದರೂ ಸರ್ಕಾರ ಇದನ್ನ ಸಂರಕ್ಷಿಸಬೇಕಿದೆ.

You Might Also Like This