ಶಿವಮೊಗ್ಗ: ಇಂದು ಮುಂಜಾನೆ ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆ ಜನರಿಗೆ ಕರಡಿಯೊಂದು ಶಾಕ್ ನೀಡಿದೆ. ಶೆಟ್ಟಿಹಳ್ಳಿಯಿಂದ ದಿಕ್ಕು ತಪ್ಪಿ ಬಂದ ಕರಡಿ, ಎಫ್ ಬ್ಲಾಕ್ ನಲ್ಲಿ ಸಂಚರಿಸಿ ಭಯ ಮೂಡಿಸಿತು. ವಾಕ್ ಮಾಡಲು ತೆರಳಿದ್ದ ಇಲ್ಲಿನ ನಿವಾಸಿ ತುಕಾರಂ ಶೆಟ್ಟಿ ಮೇಲೆ ಎಗರಿ ಪರಚಿ ಓಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಶೆಟ್ಟಿ, ಹೊಟ್ಟೆ ಮೇಲೆ ಸಣ್ಣ ತರಚು ಗಾಯಗಳಾಗಿವೆ ಅಷ್ಟೇ ಆದರೆ ಕರಡಿ ಕಂಡು ಗಾಬರಿಯಾದೆ ಎಂದರು.

ಕಾರ್ಯಾಚರಣೆ:
ಕರಡಿ ಬಂದ ಮಾಹಿತಿ, ಸ್ಥಳೀಯರಿಂದ ಅರಣ್ಯ ಇಲಾಖೆಗೆ ತಲುಪಿತ್ತು. ಸಕ್ರೆಬೈಲು ಪ್ರಾಣಿ* ವೈದ್ಯ ವಿನಯ್ ಹಾಗೂ ಶಿವಮೊಗ್ಗ ನಗರ ವೃತ್ತ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಕರಡಿ ಇಲ್ಲಿನ ಡಿವಿಜಿ ಪಾರ್ಕ್ ಬಳಿಯ ಖಾಲಿ ನಿವೇಶನದಲ್ಲಿ ಅಡಗಿ ಕುಳಿತಿತ್ತು. ಬಲೆ ಹಾಕಿ, ಒಂದು ಗಂಟೆ ಕಾರ್ಯಾಚರಣೆ, ಹಿಡಿ-ಬಿಡು ಮಾಡಿ, ಎರಡು ಸಲ ಅರಿವಳಿಕೆ ಚುಚ್ಚುಮದ್ದು ನೀಡಿ ಕೊನೆಗೂ ಸೆರೆ ಹಿಡಿದಿದ್ದಾರೆ.
ಶೆಟ್ಟಿಹಳ್ಳಿಯಾಚೆ ಕರಡಿಗಳು ಬಂದು, ಜನರಿಗೆ ತೊಂದರೆ ನೀಡಿದ ಉದಾಹರಣೆಗಳೇ ಇಲ್ಲ. ಇದು ಮೊದಲ ಪ್ರಕರಣವಾಗಿದ್ದು ಊರು ಹಿಗ್ಗುತ್ತಾ, ಕಾಡು ಕುಗ್ಗುತ್ತಾ ಇರುವುದರ ಜೊತೆಗೆ, ಈ ಬೇಸಿಗೆ ನೀರಿನ ಮೂಲಗಳನ್ನೆಲ್ಲಾ ಬರಿದು ಮಾಡಿದೆ. ಶಿವಮೊಗ್ಗ ನಗರಕ್ಕೆ ದಾಳಿ ನೀಡಲು ಪ್ರಾಣಿಗಳೂ ಸಜ್ಜಾಗಿವೆ.
ಈ ಬಗ್ಗೆ ಮಾಹಿತಿ ನೀಡಿದ ಡಿಎಫ್ ಓ ( territorial ) ಶಿವಶಂಕರ್, ಆರರಿಂದ ಎಂಟು ವರ್ಷದ ಕರಡಿ ಬಂದಿತ್ತು. ನಾಲ್ಕು ಕಿಲೋಮೀಟರ್ ಏರಿಯಲ್ ಡಿಸ್ಟಾನ್ಸ್ ತೋರುತ್ತಿದೆ. ನಾಯಿಗಳಿಂದ ಗಾಬರಿಗೊಂಡು ಹೊಂದಿಕೊಂಡಂತೆ ಇರುವ ಗೋಪಾಳ ಬಡವಾಣೆಗೆ ಬಂದಿತ್ತು. ಸೆರೆಹಿಡಿಯಲಾಗಿದೆ, ಗಾಯಗೊಂಡವನ ಮನೆಗೂ ಭೇಟಿ ನೀಡಿ ವಿಚಾರಿಸಿದೆ. ಯಾವುದೇ ಆತಂಕ ಇಲ್ಲ ಎಂದರು.