Ode to the west wind

Join Us on WhatsApp

Connect Here

ವಿದ್ಯುತ್ ದಾಹ ನೀಗಲು ಶರಾವತಿ, ವರಾಹಿ ಪಂಪ್ಡ್ ಸ್ಟೋರೇಜ್. ಬೆಂಗಳೂರಿಗೆ ಮೇಕೆದಾಟು ನೀರು: ಸಚಿವ ಜಾರ್ಜ್

WhatsApp
Facebook
Twitter
LinkedIn

ಶಿವಮೊಗ್ಗ: ವಿದ್ಯುತ್ ದಾಹ ನೀಗಲು ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್‌ ಅನಿವಾರ್ಯ ಆದರೆ ಈ ನೀರನ್ನ ಬೆಂಗಳೂರಿಗೆ ತೆಗೆದುಕೊಂಡು ಹೋಗೋದಿಲ್ಲ. ಬೆಂಗಳೂರು ಕುಡಿವ ನೀರಿನ ದಾಹಕ್ಕೆ ಮೇಕೆದಾಟು ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು
ಇಂಧನ ಸಚಿವ ಕೆ.ಜೆ ಜಾರ್ಜ್ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿ,

ಶರಾವತಿ ವಿದ್ಯುತ್ ಉತ್ಪಾದನೆ ಘಟಕದಲ್ಲಿ ಪಂಪ್ಡ್ ಸ್ಟೋರೆಜ್ ನಿರ್ಮಾಣಕ್ಕೆ ತೀರ್ಮಾನ ತೆಗದುಕೊಂಡಿದ್ದೇವೆ. ಸುಮಾರು 8.500 ಕೋಟಿ ರೂ ವೆಚ್ಚ ತಗುಲಬಹುದು. ಶರಾವತಿ ನದಿಯಿಂದ ಜಲ ವಿದ್ಯುತ್ ಉತ್ಪಾದನೆ ಮಾಡಿ ಬಿಟ್ಟ  ನೀರು ವಾಪಸ್ ನದಿಗೆ ಕಳುಹಿಸದೇ
ಅದನ್ನು ಪುನರ್ ಬಳಕೆ ಮಾಡಲು ಪಂಪ್ಡ್ ಸ್ಟೋರೆಜ್ ಅನಿವಾರ್ಯ. ಇದರಿಂದ 24 ಗಂಟೆ ವಿದ್ಯುತ್ ಉತ್ಪಾದನೆ ಮಾಡಬಹುದು.
ಶರಾವತಿ ಅಲ್ಲದೆ ವರಾಹಿಯಲ್ಲೂ ಸಹ ಸ್ಟೋರೆಜ್ ಪ್ಲಾನ್ ಮಾಡಲಾಗಿದೆ. ಹೆಚ್ಚಿನ ವಿದ್ಯುತ್ ಉತ್ಪಾದನೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಇರುವ ವಿದ್ಯುತ್ ಅಭಾವ ನೀಗಿಸಬಹುದು. ಈಗಾಗಲೇ 1.62 ಕೋಟಿ ಕುಟುಂಬಗಳಿಗೆ ನಿರಂತರ ವಿದ್ಯುತ್ ಕೊಡುತ್ತಿದ್ದೇವೆ. ಇದಕ್ಕಾಗಿ ನಮ್ಮ ರಾಜ್ಯ ಸರ್ಕಾರದಿಂದ ಅನುದಾನವನ್ನು ಬಿಡುಗಡೆ ಮಾಡುತ್ತಿದ್ದೇವೆ. ಮೊದಲು ಮಳೆಗಾಲ ಬಂದಾಗ ಕಲ್ಲಿದ್ದಲು ವಿದ್ಯುತ್ ಸ್ಥಾವರಗಳನ್ನು ವಾರ್ಷಿಕ ಮೆಂಟೆನೆನ್ಸ್ ಗಾಗಿ ಬಂದ್ ಮಾಡುತ್ತಿದ್ದೆವು.  ಈ ವರ್ಷ ಕೂಡ ಹಾಗೆ ಮಾಡಿದ್ದೇವೆ. ಆದರೆ ಮಳೆ ಕೊರತೆಯಿಂದಾಗಿ ವಿದ್ಯುತ್ ಬೇಡಿಕೆ ಹೆಚ್ಚಾಯಿತು. 16-17 ಸಾವಿರ ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇತ್ತು. ಕಳೆದ ವರ್ಷ 8-9 ಮೆಗಾವ್ಯಾಟ್ ಬೇಡಿಕೆ ಇತ್ತು.  ಈ ವರ್ಷ ಅದು ದ್ವಿಗುಣವಾಗಿಯಿತು. ಇದರಿಂದ ರೈತರಿಗೆ 7 ಗಂಟೆ ಸತತ ವಿದ್ಯುತ್ ನೀಡುವುದನ್ನು ಈಗ 5 ಗಂಟೆಗೆ ಇಳಿಸಿದ್ದೇವೆ. ಕಳೆದ ಒಂದು ತಿಂಗಳಿನಿಂದ ಮತ್ತೆ 7 ಗಂಟೆ ತಡೆ ರಹಿತ ವಿದ್ಯುತ್ ನೀಡುತ್ತಿದ್ದೇವೆ. ನಮಗೆ ಈಗ ವಿದ್ಯುತ್ ಅಭಾವವಿಲ್ಲ. ಆದರೆ ಒಂದು ವೇಳೆ ವಿದ್ಯುತ್ ಅಭಾವ ಉಂಟಾದರೆ, ವಿದ್ಯುತ್ ಖರೀದಿಸಿ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಕಾಂಗ್ರೆಸ್ ಒಂದು ಸಲ  ಯೋಜನೆ ಜಾರಿ ಮಾಡಿದರೆ, ಅದನ್ನು ವಾಪಸ್ ಪಡೆಯುವುದಿಲ್ಲ. ‌ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ವಿಚಾರ ತಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.

You Might Also Like This